ಕೂಡಿಗೆ, ಅ. ೧೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆದ ಬ್ಯಾಡಗೊಟ್ಟ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಪುನಿತ್ ರಾಜ್‌ಕುಮಾರ್ ಜ್ಞಾಪಕಾರ್ಥ ಪುನಿತ್ ಮೆಮೋರಿ ಯಲ್ ಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಕುಶಾಲನಗರದ ಕೆ.ಎಫ್.ಸಿ. ತಂಡ ಪ್ರಥಮ ಸ್ಥಾನವನ್ನು ಪಡೆದು ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಟೀಮ್ ಮೇಟ್ರಕ್ ತಂಡ ಪಡೆದುಕೊಂಡಿತು.
ಕ್ರೀಡಾಕೂಟದ ಉದ್ಘಾಟನೆ ಯನ್ನು ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ ನೆರವೇರಿಸಿ ಮಾತನಾಡಿ, ಯವ ಜನಾಂಗ ಸಂಘಟಿತರಾದರೆ ಸಮಾಜದ ಅಭಿವೃದ್ಧಿ ಸಾಧ್ಯವಾ ಗಲಿದ್ದು, ಕ್ರೀಡೆ ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದರು. ಬಹುಮಾನಗಳನ್ನು ಜೆ.ಡಿ.ಎಸ್. ಮುಖಂಡರಾದ ನಾಪಂಡ ಮುತ್ತಪ್ಪ ವಿತರಿಸಿದರು. ಸಭೆಯ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜೆ.ಡಿ.ಎಸ್. ಪಕ್ಷದ ಅಜ್ಜಳ್ಳಿ ರವಿ, ಉದ್ಯಮಿಗಳಾದ ಅಣ್ಣಯ್ಯ, ಬಾಷಾ, ಕುಶಾಲನಗರ ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ಪಿ.ಡಿ. ರವಿ, ಸ್ಥಳೀಯ ಪ್ರಮುಖರಾದ ಉದಯ, ಕೆ.ವೈ. ಮುತ್ತಾ, ಶಂಕರ್, ಪಿ.ಕೆ. ಮುತ್ತಾ, ಯುವಕ ಸಂಘದ ಸದಸ್ಯರಾದ ಸಂಜು, ಮಂಜು, ಮಣಿಕಂಠ, ಗಣೇಶ್, ಪ್ರಸಾದ್ ಹಾಜರಿದ್ದರು.