ಪೊನ್ನAಪೇಟೆ, ಅ.೧೨: ಆಗಸ್ಟ್ ೫ ರ ‘ಶಕ್ತಿ’ ಪತ್ರಿಕೆಯಲ್ಲಿ ‘ಕಿರುಗೂರಿನಲ್ಲಿ ಕಾಡಾನೆ ಹಾವಳಿ' ಎಂಬ ವರದಿ ಮೂಲಕ ಕಿರುಗೂರು ಗ್ರಾಮದಲ್ಲಿ ಕಾಡಾನೆ ಗಳಿಂದ ಸಂಭವಿಸಿದ ನಷ್ಟದ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. ಈ ವರದಿಗೆ ಅರಣ್ಯಇಲಾಖೆ ಸ್ಪಂದಿಸುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಾಡಾನೆ ದಾಳಿಯಿಂದ ನಷ್ಟ ಅನುಭವಿಸಿದ್ದ ಕಿರುಗೂರು ಗ್ರಾಮದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ರಾಟೆಮನೆ ಸಮೀಪ ಇರುವ ಪೊಕ್ಕಳಿಚಂಡ ಎನ್.ಪೂಣಚ್ಚ, ಪೊಕ್ಕಳಿಚಂಡ ಪುರುಷೋತ್ತಮ, ಪೊಕ್ಕಳಿಚಂಡ ಪಿ.ಪೂವಪ್ಪ ಅವರುಗಳಿಗೆ ಕಾಡಾನೆ ದಾಳಿಯಿಂದಾದ ನಷ್ಟವನ್ನು ಪರಿಶೀಲಿಸಿ ಇ-ಪರಿಹಾರ ತಂತ್ರಾAಶ ದಲ್ಲಿದಲ್ಲಿ ನಮೂದಿಸಲಾಗಿದೆ. ಕಿರುಗೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ ಎಂದು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. -ಚನ್ನನಾಯಕ