ಮಡಿಕೇರಿ, ಅ. ೧೧: ಶತಾಯುಷಿ ಬೈಮನ ಪೊನ್ನಪ್ಪ ಅವರ ಜನ್ಮ ಶತಮಾನೋತ್ಸವವನ್ನು ಚೇರಂಬಾಣೆ ಗೌಡ ಸಮಾಜದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಬೈಮನ ಕುಟುಂಬಸ್ಥರು, ಚೇರಂಬಾಣೆ ಗೌಡ ಸಮಾಜ, ಮರಗೋಡು ಗೌಡ ಸಮಾಜ, ಊರಿನವರು, ನೆಂಟರಿಷ್ಟರು, ಸ್ನೇಹಿತರು ಸೇರಿ ಸನ್ಮಾನಿಸಿ, ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಪ್ಪ ಅವರು ಮಾನವ ಜನ್ಮ ದೊಡ್ಡದು ಅದನ್ನು ಯಾರೂ ಕೂಡ ಕೀಳಾಗಿ ಕಾಣಬೇಡಿ, ಹೆತ್ತವರನ್ನು ದೇವರ ಸಮಾನವಾಗಿ ಕಂಡು ಗೌರವಿಸಿ ನೋಡಿಕೊಳ್ಳಿ, ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗದೆ, ಶಿಸ್ತುಬದ್ಧವಾಗಿ ಬಾಳಿದರೆ ಅಭಿವೃದ್ಧಿ ಹೊಂದಬಹುದು ಎಂದು ಹಿತೋಪದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ವಹಿಸಿದ್ದರು. ಬೈಮನ ಪೊನ್ನಪ್ಪ ಅವರ ಜೀವನ ಕ್ರಮ ಮತ್ತು ಅವರ ಅನುಭವ ಇಂದಿನ ಪೀಳಿಗೆಯವರಿಗೆ ಮಾರ್ಗದರ್ಶನ ಎಂದು ತಿಳಿಸಿದರು. ವೇದಿಕೆಯಲ್ಲಿ ಬೈಮನ ಬೋಜಪ್ಪ, ಕೆದಂಬಾಡಿ ರಾಜು, ದಂಬೆಕೋಡಿ ಸುಕುಮಾರ, ಹೊಸಮನೆ ಪೂವಯ್ಯ, ಬೈಮನ ಚೋಂದಮ್ಮ ಗಣಪತಿ, ಚೋಂದಮ್ಮ ಮಾದಯ್ಯ, ಗಂಗಮ್ಮ ಉಪಸ್ಥಿತರಿದ್ದರು. ಜಾಹ್ನವಿ ಹಾಗೂ ಮಾನಸ ಪ್ರಾರ್ಥಿಸಿದರು. ಕೆದಂಬಾಡಿ ರಾಜು, ಬೈಮನ ಮುರುಳಿ, ಬೈಮನ ಸುರೇಶ ಮಾಚಯ್ಯ, ಕೆದಂಬಾಡಿ ಸೋಮಣ್ಣ, ಗುಡ್ಡನ ಅಶೋಕ ಶತಾಯುಷಿಗೆ ಶುಭ ಹಾರೈಸಿದರು. ಕೊಟ್ಟಕೇರಿಯನ ಲೀಲಾ ದಯಾನಂದ ಅವರು ಕಿರು ಪರಿಚಯ ಮಾಡಿದರು. ಬೈಮನ ಚಿತ್ಕಲಾ ಸುರೇಶ ಮತ್ತು ವಂಶಿಕ ನಯನ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಬೈಮನ ಪೂವಮ್ಮ, ವಿಜಯಕುಮಾರ, ಹರೀಶ್, ತಿಮ್ಮಯ್ಯ ಸುಮಂತ್, ಸುದೇಶ್, ಶೋಭಿತ, ಬಾಲಕೃಷ್ಣ ಗಣೇಶ ವಾಸು ಸುಮಂತ್, ಧ್ಯಾನ್, ಹೇಮಂತ್, ರಾಕೇಶ್, ವಿನು, ಚೀಯಂಡಿ ಉದಯ್ ಕುಮಾರ್, ಬಂಧು ಬಳಗದವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಶತಾಯುಷಿಗೆ ಶುಭ ಹಾರೈಸಿದರು.
ಬೈಮನ ಜ್ಯೋತಿ ತಿಮ್ಮಯ್ಯ ಸ್ವಾಗತಿಸಿದರು. ಕೊಟ್ಟಕೇರಿಯನ ಪೂಜಾ ದಯಾನಂದ ಅಭಿನಂದನಾ ಸಂದೇಶವನ್ನು ಓದಿ ಹೇಳಿದರು. ಬೈಮನ ವನಜಾ ವಿಜಯಕುಮಾರ್ ವಂದಿಸಿದರು. ಕೊಟ್ಟಕೇರಿಯನ ದಯಾನಂದ ಕಾರ್ಯಕ್ರಮದ ನಿರೂಪಣೆ ಮಾಡಿದರು.