ಸಿದ್ದಾಪುರ, ಅ. ೧೧: ಕಾರ್ಮಿಕ ಕಾನೂನುಗಳ ರಕ್ಷಣೆ, ಬೆಲೆ ಏರಿಕೆ, ನಿರುದ್ಯೋಗ, ಕಾಡುಪ್ರಾಣಿ-ಮಾನವ ಸಂಘರ್ಷ, ನಿವೇಶನ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊAಡು ಸಿಐಟಿಯು ಜಿಲ್ಲಾ ಸಮಾವೇಶ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಮಿಕರು ನಗರದಲ್ಲಿ ಜಾಥಾ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಧರ್ಮೇಶ್, ದೇಶದಲ್ಲಿ ನಿರಂತರ ಬೆಲೆ ಏರಿಕೆಯಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟು ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಆರೋಪಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಪತನಗೊಂಡಿದ್ದು, ಬೆಲೆ ಏರಿಕೆಯಿಂದ ಬಡ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದರು.
ಅAಗನವಾಡಿ ನೌಕರರು, ಬಿಸಿಊಟ ನೌಕರರು, ತೋಟ ಕಾರ್ಮಿಕರು, ಪಂಚಾಯಿತಿ ನೌಕರರು, ತಲೆಹೊರೆ ಕಾರ್ಮಿಕರು, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ನಾಪಂಡ ಮುತ್ತಪ್ಪ, ಪ್ರಗತಿಪರ ಚಿಂತಕ ವಕೀಲ ಕೆ.ಆರ್. ವಿದ್ಯಾಧರ್, ರೈತ ಮುಖಂಡ ನೆರವಂಡ ಉಮೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಜಿಲ್ಲಾಧ್ಯಕ್ಷ ಎ. ಮಹಾದೇವ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಐ.ಆರ್. ದುರ್ಗಾ ಪ್ರಸಾದ್, ಶಾಜಿ, ರಮೇಶ್, ರತೀಶ್, ಎನ್.ಡಿ. ಕುಟ್ಟಪ್ಪನ್ ಮೊದಲಾದವರು ಉಪಸ್ಥಿತರಿದ್ದರು.