ಮಡಿಕೇರಿ, ಅ. ೧೧: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ೨೦೨೧-೨೨ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶನಿವಾರಸಂತೆಯ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ೨೦೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ, ವಿಶೇಷ ಆಹ್ವಾನಿತರಾದ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಸೋಮವಾರಪೇಟೆ ತಾಲೂಕು ಸಮಿತಿ ಅಧ್ಯಕ್ಷ ಎ.ಆರ್. ಮುತ್ತಣ್ಣ, ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ವಿ.ಜಿ. ಮೋಹನ್, ಉಪಾಧ್ಯಕ್ಷ ವಿ.ಪಿ. ಸುರೇಶ್, ಪಿ.ಕೆ. ರವಿ, ಕೆ.ಪಿ. ನಾಗರಾಜು ಹಾಗೂ ನಿರ್ದೇಶ ಕರುಗಳು ಉಪಸ್ಥಿತರಿದ್ದರು. ಕಳೆದ ಸಾಲಿನ ಆಡಳಿತ ಮಂಡಳಿ ವರದಿ ಯನ್ನು ಸಂಘದ ಗೌರವ ಕಾರ್ಯದರ್ಶಿ ಎಸ್.ಎಲ್. ಬಸವರಾಜು ಸಭೆಗೆ ವಿವರಿಸಿದರು. ೨೦೨೧-೨೨ನೇ ಸಾಲಿನ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ೨೦೨೨-೨೩ನೇ ಸಾಲಿನ ಸಂಘದ ಅಂದಾಜು ಆಯ-ವ್ಯಯವನ್ನು ನಿರ್ದೇಶಕರಾದ ಕೆ.ಕೆ. ರೇಣುಕಾ ಮಂಡಿಸಿದರು.
ಸನ್ಮಾನ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ತಹಶೀಲ್ದಾರ್ ಆಗಿ ನೇಮಕಗೊಂಡ ಒಕ್ಕಲಿಗರ ಶೀತಲ್ ಪ್ರಕಾಶ್, ಸಿವಿಲ್ ಜಡ್ಜ್ ರಂಜಿತಾ, ರಾಜ್ಯ ಮಟ್ಟದ ಕ್ರೀಡೆಯಲ್ಲಿ ಬಹುಮಾನ ಪಡೆದ ಎ.ಎಸ್. ಗಗನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿದಂತೆ ಸಂಘದ ಸದಸ್ಯರುಗಳ ಗುರುತಿನ ಚೀಟಿಯನ್ನು ಮಾಜಿ ಸಚಿವ ಬಿ.ಎ. ಜೀವಿಜಯ ಬಿಡುಗಡೆ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಅವರು ಒಕ್ಕಲಿಗ ಸಮುದಾಯದ ಬಲವರ್ಧನೆ ಕುರಿತು ಮಾತನಾಡಿದರು. ನಿರ್ದೇಶಕಿ ಜಾನಕಿ ವೆಂಕಟೇಶ್ ಪ್ರಾರ್ಥಿಸಿ, ನಿರ್ದೇಶಕ ಟಿ.ಆರ್. ಪುರುಷೋತ್ತಮ ಸ್ವಾಗತಿಸಿ, ವಿ.ಪಿ. ಶಶಿಧರ್ ನಿರೂಪಿಸಿದರು. ಮೃತಪಟ್ಟ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ನಿರ್ದೇಶಕ ಎನ್.ಕೆ. ಅಪ್ಪಸ್ವಾಮಿ ಮೃತರ ಹೆಸರುಗಳನ್ನು ಓದಿದರು.