ಸೋಮವಾರಪೇಟೆ, ಅ. ೧೧: ಮೈಸೂರು ವಿಶ್ವವಿದ್ಯಾಲಯ, ಹೊಳೆನರಸೀಪುರ ಪಡವಲಹಿಪ್ಪೆ ಹೆಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ, ಕೊಡಗು ನಾವು ಪ್ರತಿಷ್ಠಾನ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಹಯೋಗ ದೊಂದಿಗೆ ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಿರುವ ಹತ್ತು ದಿನದ ಸಮಾಜ ಕಾರ್ಯ ಶಿಬಿರವನ್ನು ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಉದ್ಘಾಟಿಸಿದರು. ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು, ದೇವಾಲಯ ಸಮಿತಿ ಉಪಾಧ್ಯಕ್ಷ ಎಂ.ಎಸ್. ತಮ್ಮಯ್ಯ, ಕಾರ್ಯದರ್ಶಿ ವಿಜಯ್ ಕುಮಾರ್, ಸದಸ್ಯರಾದ ಗಣೇಶ್ ಕುಮಾರ್, ಅರ್ಚಕರಾದ ನಂದೀಶ್, ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ರಿಯಾಜ್ ಅಹಮ್ಮದ್, ಸಜೀವ್ ಕುಮಾರ್, ಹೆಚ್.ಎನ್. ದೀಪು, ಶಾಕುಂತಲಾ ಉಪಸ್ಥಿತರಿದ್ದರು. ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕಿ ರಾಗಿಣಿ ಅವರು ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿದರು.
ಪ್ರತಿಷ್ಠಾನದ ಸುಮನಾ ಅರಕಲಗೂಡು, ಶಿಬಿರಾರ್ಥಿಗಳಾದ ರಂಜಿತಾ, ದರ್ಶಿನಿ, ಲಾವಣ್ಯ, ನಿವೇದಿತಾ ಕಾರ್ಯಕ್ರಮ ನಿರ್ವಹಿಸಿದರು.