ಮೂರ್ನಾಡು, ಅ. ೧೧: ಇತ್ತೀಚೆಗೆ ಕುಶಾಲನಗರದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಖೋ-ಖೋ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು, ಆಯ್ದ ೮ ವಿದ್ಯಾರ್ಥಿನಿಯರು ವಿಭಾಗಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ವಿ.ಕೆ. ಲಲಿತ, ದೈಹಿಕ ಶಿಕ್ಷಕಿ ಪ್ರೇಮಲತ ಶೆಡ್ತಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಅವರು ಇದ್ದಾರೆ.