ಮಡಿಕೇರಿ, ಅ. ೧೧: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. ೧೧ರ ಅಪರಾಹ್ನ ಧಾರಾಕಾರ ವಾಗಿ ಮಳೆ ಸುರಿದು ಜನರು ಮತ್ತೊಮ್ಮೆ ಬೆಚ್ಚಿಬೀಳುವಂತಾಗಿತ್ತು. ಅಪರಾಹ್ನ ೧ರ ಸುಮಾರಿಗೆ ಆರಂಭ ಗೊಂಡ ಮಳೆ ಒಂದು ತಾಸಿಗೂ ಅಧಿಕ ಸಮಯ ಸುರಿಯಿತು. ಧಾರಾಕಾರ ಮಳೆ ಯಿಂದಾಗಿ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೆ, ರಸ್ತೆಯಲ್ಲೂ ಭಾರೀ ಪ್ರಮಾಣದ ನೀರು ಹರಿದು ಕಲ್ಲುಗಳು ಕೊಚ್ಚಿ ಬಂದಿವೆ. ಜಿಲ್ಲೆಯ ಇನ್ನಿತರ ಕೆಲವೆಡೆಗಳಲ್ಲೂ ಮಳೆ ಯಾಗಿರುವ ಕುರಿತು ವರದಿಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನೂ ಒಂದೆರಡು ದಿನ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತದ ವಾತಾವರಣದಿಂದಾಗಿ ಕಾಫಿ ತೋಟಗಳ ಕೆಲಸ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೂ ಅಡ್ಡಿಯಾಗುತ್ತಿದೆ.