ಗುಡ್ಡೆಹೊಸೂರು, ಅ. ೧೧: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂWದ ವತಿಯಿಂದ ಸಹಕಾರ ಇಲಾಖೆಯಿಂದ ಮಂಜೂರಾದ ರೂ. ೩೪.೫೦ ಲಕ್ಷ ಹಣದಲ್ಲಿ ನಿರ್ಮಾಣವಾದ ಸೀಗೆಪುಡಿ ಘಟಕದ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.

ಶಾಸಕರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಏಕೈಕ ಸೀಗೆಪುಡಿ ಮಾಡುವ ಘಟಕವಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ಉತ್ತಮ ಗುಣಮಟ್ಟದ ಸೀಗೆಪುಡಿ ಇಲ್ಲಿ ದೊರೆಯುತ್ತಿದೆ. ಕೊಡಗಿನ ಅರಣ್ಯದಲ್ಲಿ ದೊರೆಯುವ ಭಾರೀ ಪ್ರಮಾಣದ ಸೀಗೆ ಇಲ್ಲಿ ಶೇಖರಣೆ ಮಾಡಲಾಗಿದೆ.

ಪುಡಿಮಾಡುವ ಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ವಹಿಸಿದ್ದರು. ಮುಖ್ಯ ಅತಿಥಿಗಳಾದ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ವಲಯ ಅರಣ್ಯಧಿಕಾರಿ ಕೆ.ವಿ. ಶಿವರಾಮ್, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್ ಕುಮಾರ್, ಕುಶಾಲನಗರ ಎ.ಪಿ.ಸಿ.ಎಂ.ಸಿ. ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಸದಸ್ಯರಾದ ಸೌಮ್ಯ, ಎಂ.ಆರ್. ಮಾದಪ್ಪ, ಸ್ಥಳೀಯರಾದ ಬಿ.ಕೆ. ಮೋಹನ್ ಬಿ.ಎಸ್. ಧನಪಾಲ್, ಎಂ.ಆರ್. ಉತ್ತಪ್ಪ, ಅಲ್ಲದೆ ಸಂಘದ ಉಪಾಧ್ಯಕ್ಷ ಬಿ.ಎನ್. ಮನು ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಹನಿಕುಮಾರ್ ಮತ್ತು ಆಡಳಿತ ಮಂಡಳಿ ಸಿಬ್ಬಂದಿಗಳು ಹಾಜರಿದ್ದರು.

ಸಹಕಾರ ಯೂನಿಯನ್‌ನ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯ್ಕ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್ಪಿ. ಗಂಗಾದರಪ್ಪ ಉಪಸ್ಥಿತರಿದ್ದರು.