ಮಡಿಕೇರಿ, ಅ. ೧೦: ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಆಶ್ರಮದಲ್ಲಿ ಶ್ರೀ ಸದ್ಗುರು ನಿರ್ಗುಣಾನಂದ ಮಹಾಸ್ವಾಮಿಜಿಗಳವರ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಾದಪೂಜೆ ಹಾಗೂ ಪಂಚಾಮೃತ ಅಭಿಷೇಕ ಮತ್ತು ಮಹಾ ಗಣಪತಿ ಹೋಮ, ಸದ್ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮಹಾಮಂಗಳಾರತಿ ಮಧ್ಯಾಹ್ನ ಅನ್ನಪ್ರಸಾದ ಹಾಗೂ ಟಿ. ಶೆಟ್ಟಿಗೇರಿ ಗ್ರಾಮದ ಸದ್ಭಕ್ತರಿಂದ ಶಿವಭಜನೆ ಜರುಗಿತು. ಹುಬ್ಬಳ್ಳಿಯ ಶ್ರೀ ಸದ್ಗುರು ಸುಬ್ರಹ್ಮಣ್ಯ ಮಹಾ ಸ್ವಾಮೀಜಿಗಳು, ಸಿದ್ದು ಸ್ವಾಮಿ ಹಾಜರಿದ್ದರು.