ಮುಳ್ಳೂರು, ಅ. ೧೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳುಗಳಲೆ ಒಕ್ಕೂಟ ಸಭೆ ಒಕ್ಕೂಟದ ಅಧ್ಯಕ್ಷೆ ಎಸ್.ಪಿ. ಭಾಗ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶನಿವಾರಸಂತೆ ವಲಯ ಮೇಲ್ವಿಚಾರಕ ನಾಗರಾಜ್ ಮಾಹಿತಿ ನೀಡಿ, ಇದೀಗ ಶನಿವಾರಸಂತೆಯಲ್ಲಿ ಸಂಸ್ಥೆಯ ವಲಯ ತೆರೆದಿದ್ದು ಈ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಲು ಅನುಕೂಲವಾಗಿದೆ ಎಂದರು. ಸಂಘದ ಪ್ರತಿ ಸದಸ್ಯರು ಆರೋಗ್ಯದ ಹಿತದೃಷ್ಟಿಯಿಂದ ಸರಕಾರದ ಯೋಜನೆಯ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು, ಪ್ರಧಾನಮಂತ್ರಿ ದಿಶಾ ಯೋಜನೆಯ ಸೇವೆ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಒಕ್ಕೂಟ ಅಧ್ಯಕ್ಷೆ ಎಸ್.ಪಿ. ಭಾಗ್ಯ ಮಾತನಾಡಿ, ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಕ್ರಮಬದ್ಧವಾಗಿ ಒಕ್ಕೂಟದ ವಾರದ ಸಭೆಯನ್ನು ನಡೆಸುವುದರ ಮೂಲಕ ಸಂಘವನ್ನು ಅಭಿವೃದ್ಧಿಗೊಳಿಸುವಂತೆ ಸದಸ್ಯರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಸಂಘದ ಸದಸ್ಯೆ ಹಾಗೂ ಶನಿವಾರಸಂತೆ ಗ್ರಾ.ಪಂ.ಯ ನೂತನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಫರ್ಜಾನ್ ಬಾನು ಅವರನ್ನು ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಜ್ಯೋತಿ, ಒಕ್ಕೂಟ ಕಾರ್ಯದರ್ಶಿ ಎಸ್.ಪಿ. ದಿವ್ಯ, ಸೇವಾ ನಿರತ ಎಸ್.ಆರ್. ಶೋಭಾವತಿ ಮುಂತಾದವರಿದ್ದರು.