ಮಡಿಕೇರಿ, ಅ. ೧೦: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವÊಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಯಾನ್ಸ್ ಕ್ಲಬ್. ರೋಟರಿ, ಗೋಣಿ ಕೊಪ್ಪಲು ಇವರ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಒರೇಕಲ್ ಸಂಸ್ಥೆಯ ಪ್ರೀತಿ ಅರುಣ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಪ್ರಚಲಿತÀ ವಿದ್ಯಾಮಾನಗಳ ಬಗ್ಗೆ ಅರಿತುಕೊಂಡು, ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು.

ಯಾನ್ಸ್ ಕ್ಲಬ್, ರೋಟರಿ ಅಧ್ಯಕ್ಷೆ ಅಕ್ಕಮ್ಮ ಮುತ್ತಪ್ಪ ಅವರು ಮಾತನಾಡಿ, ಯಾನ್ಸ್ ಕ್ಲಬ್ ಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಕೈಗೊಂಡಿರುವAತಹ ವಿವಿಧ ಕಾರ್ಯಚಟುವಟಿಕೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಧ್ಯಕ್ಷತೆಯನ್ನು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರು ವಹಿಸಿದ್ದರು. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಹೇಳಿದರು. ಯಾನ್ಸ್ಕ್ಲಬ್ ರೋಟರಿಯ ಕಾರ್ಯದರ್ಶಿ ವಿಶಾಲು ಪೂಣಚ್ಚ, ಯಾನ್ಸ್ಕ್ಲಬ್ ರೋಟರಿಯ ಹಾಗೂ ರೋಟರಿ ಕ್ಲಬ್ ಗೋಣಿಕೊಪ್ಪದ ಹಲವು ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಪಿ.ಆರ್. ದಿವ್ಯ ಹಾಗೂ ಕಾರ್ಯಕ್ರಮ ಸಂಯೋಜಕಿ ಆಂಗ್ಲ ಉಪನ್ಯಾಸಕಿ ಎಂ.ಬಿ. ಪೂವಮ್ಮ ಹಾಜರಿದ್ದರು.