ಮಡಿಕೇರಿ, ಅ. ೧೦: ಸಿಐಎಸ್‌ಸಿಇ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆ ಇತ್ತೀಚೆಗೆ ‘ಪ್ರಕಾಶ್ ಪಡುಕೋಣೆ - ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸ್ಲೆನ್ಸ್’’ನಲ್ಲಿ ನಡೆಯಿತು. ಒಟ್ಟು ೧೩ ರಾಜ್ಯ ಹಾಗೂ ವಲಯಗಳಿಂದ ಸುಮಾರು ೨೨೦ ಶೂರ‍್ಸ್ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಕೊಡಗಿನ ಗೋಣಿಕೊಪ್ಪಲಿನ ಕಾಲ್ಸ್ ಎಎಸ್‌ಎಫ್‌ನಿಂದ ಹತ್ತು ಶೂರ‍್ಸ್ ‘Peeಠಿ ಡಿighಣ ಡಿiಜಿಟe’ ಹಾಗೂ ಔಠಿeಟಿ ಡಿighಣ ಡಿiಜಿಟe’ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅದರಲ್ಲಿ ಶಾಲೆಯ ಆಯಿರಾ ಬೋಪಣ್ಣ ಅಂಡರ್ ೧೪ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರೆ, ಕ್ರಿಷ್ ಗಣಪತಿ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿಕೊಂಡರು.

ಟೀಮ್ ಇವೆಂಟ್‌ನಲ್ಲಿ

ಅAಡರ್ -೧೭ (ಬಾಲಕಿಯರು ಪ್ರಥಮ, ಅಂಡರ್ -೧೪ (ಬಾಲಕಿಯರು - ದ್ವಿತೀಯ, ಅಂಡರ್ -೧೪ (ಬಾಲಕರು) - ದ್ವಿತೀಯ, ಅಂಡರ್ -೧೯ (ಬಾಲಕಿಯರು) - ದ್ವಿತೀಯ, ಅಂಡರ್ -೧೭ (ಬಾಲಕರು) - ಪ್ರಥಮ ಸ್ಥಾನಗಳಿಸಿಕೊಂಡರು. ವಿದ್ಯಾರ್ಥಿಗಳಾದ ವಿಹಾ ಪೊನ್ನಮ್ಮ, ಆಂಚಲ್ ಗಂಗ, ಆದ್ಯ ಚೋಂದಮ್ಮ, ಅಕ್ಷಯ ಪ್ರಸಾದ್, ಅಭಿಷೇಕ್ ಎಸ್, ನಿಶ್ಮ ನೀಲಮ್ಮ, ವಿದ್ಯ ಅರುಣ್, ದೇವಯ್ಯ ಬಿ.ಎನ್. ಟೀಮ್ ಇವೆಂಟ್‌ನಲ್ಲಿ ಭಾಗವಹಿಸಿದ್ದರು.