ಕೂಡಿಗೆ, ಅ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೫ನೇ ಹಣಕಾಸು ಮತ್ತು ಸರಕಾರದಿಂದ ವಿವಿಧ ಯೋಜನೆಗಳ ಮೂಲಕ ಬಿಡುಗಡೆಯಾದ ಮಂಜೂರಾದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸದಸ್ಯರುಗಳಾದ ಟಿ.ಪಿ. ಹಮೀದ್, ಅನಂತ್, ಅರುಣ್‌ರಾವ್ ಒತ್ತಾಯಿ ಸಿದರು. ಅದಕ್ಕೆ ಸಂಬAಧಿಸಿದAತೆ ಚರ್ಚೆ ನಡೆಸಿ ಈ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ವಾರ್ಡ್ಗಳ ಕಾಮಗಾರಿಗಳನ್ನು ಪೂರ್ಣಗೊಳಿಸು ವಂತೆ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು. ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಾಳಿ ಹೆಚ್ಚಾಗಿದ್ದು, ಭುವನಗಿರಿ ಗ್ರಾಮದಿಂದ ಸೀಗೆಹೊಸೂರು ಗ್ರಾಮವರೆಗಿನ ಉಪ ರಸ್ತೆಗಳಿಗೆ ಮತ್ತು ಮುಖ್ಯ ರಸ್ತೆಯ ಅನೇಕ ಕಡೆಗಳಲ್ಲಿ ಹೊಸ ಬೀದಿ ದೀಪಗಳನ್ನು ಅಳವಡಿಕೆ ಮಾಡುವಂತೆ ಆ ಭಾಗದ ಸದಸ್ಯರುಗಳಾದ ಜಯಶೀಲಾ ಮತ್ತು ಅನಂತ್ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಪೂರಕವಾಗುವಂತೆ ಕಂದಾಯ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವ ಬಗ್ಗೆ ಚರ್ಚೆ ನಡೆದವು. ಅಲ್ಲದೆ ಹಿಂದಿನ ಗ್ರಾಮ ಸಭೆ ಮತ್ತು ಮಾಸಿಕ ಸಭೆಗಳಲ್ಲಿ ಚರ್ಚೆಗಳಾದ ವಿಷಯಗಳನ್ನು ತುರ್ತಾಗಿ ಕ್ರಮ ವಹಿಸುವಂತೆ ತೀರ್ಮಾನಿಸಲಾಯಿತು.
ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳನ್ನು ಮಂಡಿಸಲಾಯಿತು. ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಅವರು ಸರಕಾರದ ಹೊಸ ಯೋಜನೆಗಳ ಮಾಹಿತಿಯನ್ನು ಸಭೆಗೆ ತಿಳಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶ ಇರುವುದರಿಂದ ಆಯಾ ವ್ಯಾಪ್ತಿಯ ಸದಸ್ಯರು ಗ್ರಾಮಸ್ಥರ ಕೆಲಸ ನೋಂದಣಿ ಕಾರ್ಡ್ ಮಾಡಿಕೊಂಡು ಅದರ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಬಹುದು, ಅಲ್ಲದೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮವನ್ನು ವಹಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯಗಳಾದ ಹೆಚ್.ಎಸ್. ರವಿ, ಶಿವಕುಮಾರ್, ವಾಣಿ, ರತ್ನಮ್ಮ, ಜಯಶ್ರೀ, ಜಯಶೀಲಾ, ಚಂದ್ರು ಲಕ್ಷಿö್ಮ, ಪಲ್ಲವಿ, ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ, ಪುನೀತ್ ಹಾಜರಿದ್ದರು.