*ಗೋಣಿಕೊಪ್ಪ, ಅ. ೧೦: ಹುದೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ರೂ. ೧ ಲಕ್ಷ ವೆಚ್ಚದ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಪ್ರಾಜೆಕ್ಟರ್, ಲ್ಯಾಪ್‌ಟಾಪ್, ನೋಟ್ ಪುಸ್ತಕ ನೀಡಿ ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸಲಾಯಿತು.
ಸಂಸ್ಥೆ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ, ಕಾರ್ಯದರ್ಶಿ ಅರುಣ್ ತಮ್ಮಯ್ಯ, ಹಿರಿಯರಾದ ಡಾ. ಚಂದ್ರಶೇಖರ್, ಕಾವೇರಪ್ಪ, ಕಿಶೋರ್ ಮಾದಪ್ಪ, ಕೆ.ಬಿ. ನವಿನ್, ಡಾ. ಕಾವೇರಿ ನಂಬೀಷನ್, ಸಮೀರ್ ಗುಪ್ತ, ಮಂಜುನಾಥ್, ಟಿ.ವಿ. ಮೋಹನ್, ಪಿ.ಬಿ. ಪೂಣಚ್ಚ, ಮುಖ್ಯ ಶಿಕ್ಷಕಿ ವಿ.ಎಂ. ಬಿನಿ ಇದ್ದರು.