ಗೋಣಿಕೊಪ್ಪ ವರದಿ, ಅ. ೧೦: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ. ೪೯ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ತಿಳಿಸಿದರು.
ಸಂಘದ ಮರೂರು ಕೃಷಿ ಪ್ರಾಂಗಣದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿ, ೧೨೫೫ ಸದಸ್ಯರ ಬಲದಿಂದ ೧.೧೯ ಕೋಟಿ ಪಾಲು ಬಂಡವಾಳ, ೧.೭೮ ಕ್ಷೇಮನಿಧಿ ಹೊಂದಿದೆ. ೧೧.೫ ಠೇವಣಿ ನಿಧಿ ಸಂಗ್ರಹಿಸಿ ಪ್ರಗತಿ ಸಾಧಿಸಿದೆ. ಒಟ್ಟು ರೂ. ೯೩.೫ ಕೋಟಿ ವಹಿವಾಟು ನಡೆಸಿದೆ. ೨೨.೫ ದುಡಿಯುವ ಬಂಡವಾಳ ಹೊಂದಿದೆ. ಆಡಿಟ್‌ನಲ್ಲಿ ಎ ತರಗತಿ ಸಾಧನೆ ಹೊಂದಿದ್ದು, ಶೇ. ೨೨ ಡೆವಿಡೆಂಡ್ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಬೈಲಾ ತಿದ್ದುಪಡಿ, ಸಿಬ್ಬಂದಿ ಪಿಂಚಣಿ ನಿಧಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಂಜೂರಾತಿ ಪಡೆದು ಕೊಳ್ಳಲಾಯಿತು. ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಉಪಾಧ್ಯಕ್ಷ ಪಾಲೇಂಗಡ ಜೆ. ನಂಜಪ್ಪ, ನಿರ್ದೇಶಕರಾದ ಚೆಕ್ಕೇರ ಎಂ. ಅಚ್ಚಯ್ಯ, ಬಿ.ಬಿ. ಚಂಗಪ್ಪ, ಎಂ.ಎA. ಮಹೇಶ, ಎಸ್.ವಿ. ಚಂದ್ರಶೇಖರ್, ಕೆ.ಕೆ. ಪದ್ಮನಾಭ, ಹೆಚ್.ಬಿ. ಗಣೇಶ, ಹೆಚ್.ಎಸ್. ಗೋವಿಂದ, ಜಿ.ಎನ್. ಜಯಮ್ಮ, ಹೆಚ್.ಡಿ. ಲಕ್ಷö್ಮಮ್ಮ, ಎಂ.ಎ. ಮಂಜುಳ, ಯು.ಎಂ. ಸವಿತಾ, ಡಿಸಿಸಿ ಬ್ಯಾಂಕ್ ಪ್ರಮುಖರಾದ ಮುತ್ತಮ್ಮ, ಸಿಇಒ ವಿ.ಎಸ್. ಸುಬ್ರಮಣಿ ಇದ್ದರು.