ಮಡಿಕೇರಿ, ಅ. ೧೦: ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ವಿಭಾಗದ ನಿಧಿಯಿಂದ ಸಂಸದ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಕೊಡಗು ಜಿಲ್ಲೆಯ ಕುಗ್ರಾಮಗಳ ಐನ್ಮನೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಇತ್ತೀಚೆಗೆ ರೂ.೨.೪೬ ಕೋಟಿ ಹಣ ಬಿಡುಗಡೆಗೊಳಿಸಿದ್ದು, ಈ ಪೈಕಿ ರೂ. ೧.೫ ಕೋಟಿ ವೆಚ್ಚದಲ್ಲಿ ನಡೆಯುವ ಮಡಿಕೇರಿ ತಾಲೂಕು ಕತ್ತಲೆಕಾಡಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು.
ವಿ.ಹೆಚ್.ಎಸ್ (ವಿರಾಟ್ ಹಿಂದೂಸ್ಥಾನ್ ಸಂಗಮ್) ರಾಷ್ಟಿçÃಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ತಾ.೯ ರಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಈ ನಿಧಿಯು ನಿರ್ಲಕ್ಷö್ಯಕ್ಕೆ ಒಳಗಾದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಪ್ರಸ್ತುತ ಕಡಗದಾಳಿನಲ್ಲಿ ನಡೆಯುವ ಕಾಮಗಾರಿಯಿಂದ ೧೦೦ ವರ್ಷ ಅವಧಿವರೆಗೂ ರಸ್ತೆ ಗುಣಮಟ್ಟಕ್ಕೆ ಯಾವುದೇ ತೊಂದರೆಯಾಗದAತೆ ಕಾರ್ಯನಿರ್ವಹಿಸಬೇಕಾಗಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಇಲ್ಲಿ ಯಾವುದೇ ರೀತಿಯ ಕಮಿಷನ್ ಯಾರಿಗೂ ದೊರಕುವುದಿಲ್ಲ. ಸಂಪೂರ್ಣ ಹಣ ಕಾಮಗಾರಿಗೆ ಬಳಸಲಾಗುವುದೆಂದರು. ರಸ್ತೆ ಗುಣಮಟ್ಟದ ಬಗ್ಗೆ ಜಿಲ್ಲಾಡಳಿತ ಗಮನಹರಿಸುವಂತೆಯೂ ಕೋರಿದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಪೊರಿಮಂಡ ದಿನಮಣಿ, ಪಂಚಾಯಿತಿ ಸದಸ್ಯರಾದ ಪೊರಿಮಂಡ ತಂಗಮ್ಮ ಲೋಕೇಶ್, ಯಾಲದಾಳು ಬಾಲಕೃಷ್ಣ, ವಿ.ಹೆಚ್.ಎಸ್. ಕಾರ್ಯಕರ್ತ ವಿಜೇಂದ್ರ ಶೆಟ್ಟಿ, ಬೆಂಗಳೂರಿನ ಹಿರಿಯ ಪತ್ರಕರ್ತ ಚೌದ್ರಿ, ಡಾ. ಎಜಾಝುದ್ದಿನ್ ಭಾಗವಹಿಸಿದ್ದರು.
ಸದಸ್ಯರಾದ ಚೋಳಪಂಡ ಜ್ಯೋತಿ, ಪುಲ್ಲೆರ ಸ್ವಾತಿ ಕಾಳಪ್ಪ, ಲೆ.ಕರ್ನಲ್ ಪಾರ್ವತಿ, ಅರೆಯಡ ಗಿರೀಶ್, ಚೆಂಬಾAಡÀ ಜನತ್, ಬೇಪಡಿಯಂಡ ದಿನು, ಮಣವಟ್ಟಿರ ಚಿಣ್ಣಪ್ಪ, ನಂದಿನೆರವAಡ ನಂದ, ದಿನೇಶ್, ರವಿ ಬಸಪ್ಪ, ಬದಲೆರ ಕೌಶಿ, ಪುಲ್ಲೆರ ಕಾಳಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಅರ್ಚಕ ಬಾಲಕೃಷ್ಣ ಭಟ್ ಅವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಲೋಕೋಪಯೋಗಿ ಇಲಾಖೆ ಅಭಿಯಂತರ ಪ್ರಮೋದ್ ಪ್ರಾರ್ಥನೆ ನೆರವೇರಿಸಿದರು.