ಮಡಿಕೇರಿ, ಅ. ೧೦: ದಸರಾ ಪ್ರಯುಕ್ತ ಇತ್ತೀಚೆಗೆ ಮೈಸೂರಿನಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆದ ರಾಜ್ಯಮಟ್ಟದ ದಸರಾ ಸಿ.ಎಂ. ಕಪ್-೨೦೨೨ ಫೆನ್ಸಿಂಗ್ (ಕತ್ತಿವರಸೆ) ಸಾಹಸ ಕ್ರೀಡೆಯಲ್ಲಿ ಜಿಲ್ಲೆಯ ಯುವಕ ಕೆಚ್ಚೆಟ್ಟಿರ ವಿಜಯ್ ಉತ್ತಯ್ಯ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.
ಈ ಹಿಂದಿನಿAದಲೂ ಕತ್ತಿವರಸೆಯಲ್ಲಿ ಉತ್ತಮ ಸಾಧನೆ ತೋರಿ ಹೆಸರು ಮಾಡುತ್ತಿರುವ ವಿಜಯ್ ಉತ್ತಯ್ಯ ದಸರಾ ಕ್ರೀಡೆಯಲ್ಲಿ ಇಪ್ಪಿ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಮಡಿಕೇರಿಯ ಸಂತ ಮೈಕಲರ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ವಿಜಯ್ ಇದೀಗ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜ್ ಆಫ್ ಲಾ ದಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಡಗದಾಳುವಿನ ಕೆಚ್ಚೆಟ್ಟಿರ ದೇವಯ್ಯ ಹಾಗೂ ರೇಷ್ಮಾ ದಂಪತಿಯ ಪುತ್ರ.