ಮಡಿಕೇರಿ, ಅ. ೧೦: ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಮತ್ತು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ ಮತ್ತು ಸ್ವಾತಂತ್ರö್ಯ ಅಮೃತ ಮಹೋತ್ಸವದ ಕುರಿತು ಭಾಷಣ ಸ್ಪರ್ಧೆ ನಡೆಯಿತು.

ನಗರದ ಲಯನ್ಸ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಕವಿತ ಬೊಳ್ಳಪ್ಪ ಉದ್ಘಾಟಿಸಿ ಮಾತ ನಾಡಿದರು. ಗಾಂಧಿ ವಿಚಾರಧಾರೆಗಳು ಯುವ ಜನರನ್ನು ಕಾಡುತ್ತಲಿದ್ದರೆ ದೇಶದ ಭವಿಷ್ಯವನ್ನು ಗಟ್ಟಿಗೊಳಿಸ ಬಹುದು. ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಗಾಂಧಿವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಕರೆ ನೀಡಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿ, ಸದಸ್ಯ ಲಿಯಾಕತ್ ಆಲಿ ವಂದಿಸಿದರು.

ಸ್ಪರ್ಧೆಯ ವಿಜೇತರಿಗೆ ಅ.೨ ರಂದು ಗಾಂಧಿಜಯAತಿ ದಿನ ನಗರದ ಗಾಂಧಿ ಮೈದಾನದಲ್ಲಿ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಗುವುದು ಎಂದು ಮುನೀರ್ ಅಹಮ್ಮದ್ ತಿಳಿಸಿದರು.