ಶನಿವಾರಸಂತೆ, ಅ. ೧೦: ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ೧೦ನೇ ತರಗತಿಯ ನಿಶಾಂತ್, ೯ನೇ ತರಗತಿಯ ರಜಿತ್, ಕಿಶನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ೧೦ನೇ ತರಗತಿಯ ಕೌಶಿಕ್, ತೇಜಸ್, ೬ನೇ ತರಗತಿಯ ದೈವಿಕ್ ದ್ವಿತೀಯ ಸ್ಥಾನ ಗಳಿಸಿದ್ದು, ಎಲ್ಲರೂ ನವೆಂಬರ್‌ನಲ್ಲಿ ಕಟೀಲ್‌ನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕರಾಟೆ ತರಬೇತುದಾರ ಸಂಕೇತ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಕಾರ್ಯ ನಿರ್ವಹಿಸಿದ್ದರು.