ಕೂಡಿಗೆ, ಅ. ೧೦: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ೫ ಎಕರೆಗಳಷ್ಟು ಪ್ರದೇಶದ ಕ್ರೀಡಾಂಗಣ ದುಸ್ಥಿತಿಯಲ್ಲಿದೆ. ಕಳೆದ ೬ ತಿಂಗಳಿAದ ಕೃಷಿ ಇಲಾಖೆಯ ವತಿಯಿಂದ ಮೈದಾನದ ಮೇಲ್ಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಕೊಳವೆ ಬಾವಿಯನ್ನು ಅಲ್ಲಿನ ವಸತಿ ಗೃಹಗಳಿಗೆ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ ಕೊರೆಯಲಾಗಿದೆ.

ಆದರೆ ಕೊಳವೆ ಬಾವಿಯಿಂದ ಕಳೆದ ೬ ತಿಂಗಳುಗಳಿAದ ನೀರು ಪೈಪ್‌ನ ಮೂಲಕ ಉಕ್ಕಿ ಹರಿಯುತ್ತಿದೆ. ಈ ನೀರು ರಸ್ತೆಯ ಮೂಲಕ ಹರಿದು ಕೆಳ ಭಾಗದಲ್ಲಿರುವ ಮೈದಾನಕ್ಕೆ ಹರಿಯುತ್ತಿದೆ. ಇದನ್ನು ಕಂಡರೂ ಕಾಣದಂತೆ ಎರಡೂ ಇಲಾಖೆಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ನೀರಿನ ವ್ಯವಸ್ಥೆಗೆ ಕೊಳವೆ ಬಾವಿಯನ್ನು ಕೃಷಿ ಇಲಾಖೆಯವರು ಕೊರೆಸಿದರೆ, ನೀರು ತಾನಾಗಿ ಉಕ್ಕಿ ಹರಿಯುತ್ತಿರುವುದು ಡಯಟ್ ಕ್ರೀಡಾಂಗಣಕ್ಕೆ. ಕಳೆದ ೬ ತಿಂಗಳುಗಳಿAದ ನೀರು ಹರಿದು ಮೈದಾನ ಮಾತ್ರ ಗದ್ದೆಯಂತಾಗಿದೆ.

ಇದರ ಜೊತೆಯಲ್ಲಿ ಮೈದಾನದ ಕೆಲ ಭಾಗದಲ್ಲಿ ನೀರು ನಿಂತ ಪರಿಣಾಮವಾಗಿ ಮೈದಾನ ಸಂಪೂರ್ಣವಾಗಿ ಹಾಳಾಗುವುದರ ಜೊತೆೆಯಲ್ಲಿ ಮೈದಾನಕ್ಕೆ ಹೊಂದಿಕೊAಡAತೆ ಇರುವ ಶಾಲಾ ಕಾಲೇಜು ಪ್ರದೇಶಕ್ಕೆ ನೀರು ಹರಿಯುತ್ತಿದೆ.

ಜಿಲ್ಲೆಯ ಪ್ರತಿಷ್ಠಿತ ಮೈದಾನದಲ್ಲಿ ಒಂದಾಗಿದ್ದ ಈ ಮೈದಾನ ಇದೀಗ ಪಾಳು ಬಿದ್ದಂತಾಗಿದೆ. ಈ ಮೈದಾನದ ರಸ್ತೆಯಲ್ಲಿ ಕೃಷಿ ಇಲಾಖೆಯ ಮತ್ತು ಡಯಟ್‌ನ ಶಿಕ್ಷಣ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಈ ರಸ್ತೆಯಲ್ಲಿಯೇ ತೆರಳಿದರೂ ಯಾರೂ ಸಹ ಇದರತ್ತ ಗಮನ ಹರಿಸುತ್ತಿಲ್ಲ.

ಇದು ರಾಜ್ಯ ಮತ್ತು ರಾಷ್ಟಿçÃಯ ಮಟ್ಟದ ಹಾಕಿ ಮತ್ತು ವಾಲಿಬಾಲ್ ಪಂದ್ಯಾವಳಿಗಳು ನಡೆದ ಮೈದಾನವಾಗಿದೆ. ಕಳೆದ ೨೦ ವರ್ಷಗಳ ಹಿಂದೆ ರಾಜ್ಯದ ಪ್ರಮುಖ ಕ್ರೀಡಾ ಶಾಲೆಗೆ ಪ್ರಮುಖ ಮೈದಾನ, ಕಳೆದ ೧೦ ವರ್ಷಗಳ ಹಿಂದೆ ಆರಂಭವಾದ ಕೊಡಗು ಸೈನಿಕ ಶಾಲಾ ವಿದ್ಯಾರ್ಥಿಗಳ ಪ್ರಮುಖ ಕ್ರೀಡಾಂಗಣ ಇದಾಗಿದೆ. ಈ ಮೈದಾನ ಇದೀಗ ಪಾಳುಬಿದ್ದಿದೆ. ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾ ಕೂಟಗಳನ್ನು ಆಯೋಜಿಸಲು ಅನುಕೂಲವಾದ ಸ್ಥಳ ಇರುವುದರಿಂದ ಅಲ್ಲದೆ ಈ ಮೈದಾನದಲ್ಲಿ ಅಭ್ಯಾಸಿಸಿದ್ದ ನೂರಾರು ಕ್ರೀಡಾಪಟುಗಳು ರಾಜ್ಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ತಂಡಗಳಿಗೆ ಆಯ್ಕೆಯಾಗಿರುತ್ತಾರೆ. ಸಂಬAಧಿಸಿದ ಇಲಾಖೆಯವರು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಮೈದಾನದ ಉಳಿವಿಗೆ ಸಹಕಾರಿಗಳಾಗಬೇಕೆಂದು ಕೂಡಿಗೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರೀಡಾಭಿಮಾನಿಗಳ ಮತ್ತು ಕ್ರೀಡಾಪಟುಗಳು ಒತ್ತಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ