ಮಡಿಕೇರಿ, ಅ. ೧೦: ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ಆರಂಭಿಸಿರುವ ಅಭಿಯಾನಕ್ಕೆ ಮಾಜಿ ಸಚಿವ ಬಿ.ಎ. ಜೀವಿಜಯ ಬೆಂಬಲ ಸೂಚಿಸಿದ್ದಾರೆ. ತಮ್ಮ ನಿವಾಸಕ್ಕೆ ಅಭಿಯಾನದ ಭಾಗವಾಗಿ ಇತ್ತೀಚೆಗೆ ಭೇಟಿ ನೀಡಿದ ಕೊರವೇ ಪ್ರಮುಖರೊಂದಿಗೆ ಚರ್ಚಿಸಿದ ಅವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೊಡಗಿನ ಯುವಜನರ ಬೇಡಿಕೆ ಸಮಯೋಚಿತವಾಗಿದ್ದು, ಕೊಡಗು ರಕ್ಷಣಾ ವೇದಿಕೆಯ ಅಭಿಯಾನಕ್ಕೆ ನಾನು ಕೂಡ ಕೈಜೋಡಿಸುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರೊAದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮಾತನಾಡಿ ಪಕ್ಷಾತೀತವಾಗಿ ಅಭಿಯಾನ ನಡೆಸುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೊರವೇ ಜಿಲ್ಲಾ ನಿರ್ದೇಶಕ ಸುಲೇಮಾನ್, ಹೆಬ್ಬಾಲೆ ಘಟಕದ ಅಧ್ಯಕ್ಷ ಚಂದ್ರಕುಮಾರ್ ಪಟೇಲ್, ಕಾರ್ಯದರ್ಶಿ ಹೆಚ್.ಟಿ.ಪುನೀತ್, ಕಾರ್ಯಕರ್ತ ಅವಿನಾಶ್ ಹಾಗೂ ವೇದಿಕೆಯ ಹಿತೈಷಿ ನಾಗೇಶ್ ಈ ಸಂದರ್ಭ ಹಾಜರಿದ್ದರು.
ಪೊನ್ನಂಪೇಟೆಯಲ್ಲಿ
ಪೊನ್ನAಪೇಟೆ: ಕೊಡಗು ರಕ್ಷಣಾ ವೇದಿಕೆ ಪದಾಧಿಕಾರಿಗಳು ಪೊನ್ನಂಪೇಟೆಗೆ ಭೇಟಿ ನೀಡಿ ಪ್ರಮುಖರ ಬೆಂಬಲ ಕೋರಿದರು. ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಪ್ರಮುಖರಾದ ಮಾಳೇಟಿರ ಶ್ರೀನಿವಾಸ್, ಅಪ್ಪಂಡೆರAಡ ಯಶ್ವಂತ್ ಕಾಳಪ್ಪ, ಪಾಲೇಂಗಡ ಅಮಿತ್, ಶಾಂತೆಯAಡ ನಿರನ್ ಮತ್ತಿತರರನ್ನು ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ನೇತೃತ್ವದ ತಂಡ ಭೇಟಿ ಮಾಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಭಿಯಾನವನ್ನು ಯಶಸ್ವಿಗೊಳಿಸಲು ಕೈಜೋಡಿಸುವಂತೆ ಮನವಿ ಮಾಡಿತು. ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಬಿ.ಶೆಟ್ಟಿಗೇರಿ ಘಟಕದ ಅಧ್ಯಕ್ಷ ಕಡೆಮಾಡ ಶರತ್ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.