ವೀರಾಜಪೇಟೆ, ಅ. ೯: ಈ ವರ್ಷದ ಈದ್‌ಮಿಲಾದುನ್ನಬಿ ಅಂಗವಾಗಿ ವೀರಾಜಪೇಟೆಯ ಶಾಫಿ ಜುಮಾ ಮಸೀದಿ ಸಮಿತಿಯ ಆಶ್ರಯದಲ್ಲಿ ತಾ. ೧೨ ರಿಂದ ೧೬ ರವರೆಗೆ ಐದು ದಿನಗಳ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಈದ್ ಆಚರಿಸಲಾಗುವುದೆಂದು ಸಮಿತಿ ಕಾರ್ಯದರ್ಶಿ ಸಿ.ಹೆಚ್. ಅಲಿ ತಿಳಿಸಿದ್ದಾರೆ. ತಾ. ೧೨ರ ಸಂಜೆ ೭ ಗಂಟೆಗೆ ಮಾಹಿನ್ ದಾರಿಮಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಫಿ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ರವೂಫ್ ಹುದವಿಯವರು ಮುಖ್ಯ ಭಾಷಣ ಮಾಡಲಿದ್ದಾರೆ. ತಾ. ೧೩ ರಂದು ಆಶ್ರಫ್ ರಹ್ಮಾನಿಯವರು ಉಪನ್ಯಾಸ ನೀಡಲಿದ್ದಾರೆ. ತಾ. ೧೪ ರಂದು ಸಂಜೆ ೭ ಗಂಟೆಗೆ ಝುಬೈರ್ ತೋಟಿಕ್ಕಲ್ ಹಾಗೂ ಸಂಗಡಿಗರಿAದ ಕಥಾಪ್ರಸಂಗ ನಡೆಯಲಿದೆ. ತಾ. ೧೫ ರಂದು ಮಧ್ಯಾಹ್ನ ೨ ಗಂಟೆಗೆ ನಡೆಯುವ ಸೌಹಾರ್ದ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಪುರಸಭಾ ಸದಸ್ಯರುಗಳಾದ ಕೆ.ಹೆಚ್. ಮುಹಮ್ಮದ್ ರಾಫಿ, ಎಸ್.ಹೆಚ್. ಮತೀನ್, ಸಿ.ಕೆ. ಪ್ರಥ್ವಿನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸಮಾಜ ಸೇವಕರುಗಳಾದ ಆತೀಫ್ ಮನ್ನಾ, ಸಿ.ಕೆ.ರಿಯಾಝ್ ಪಾಲ್ಗೊಳ್ಳಲಿದ್ದಾರೆ. ಸಂಜೆ ೭ ಗಂಟೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತಾ. ೧೬ ರಂದು ಬೆಳಿಗ್ಗೆ ೮ ಗಂಟೆಗೆ ಮಿಲಾದ್ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಝಿಯಾರತ್ ಮೌಲೂದ್ ಮತ್ತು ದುಆ ಪಾರಾಯಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.