ನಾಪೋಕ್ಲು, ಅ. ೯: ಲಯನ್ಸ್ ಸಂಸ್ಥೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರಾಂತಿಯ ಅಧ್ಯಕ್ಷ ಲಯನ್ ಕೋಟೆರ ಶಾಶ್ವಥ್ ಬೋಪಣ್ಣ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಲಯನ್ಸ್ ಸಂಸ್ಥೆಗೆ ಪ್ರಾಂತಿಯ ಅಧ್ಯಕ್ಷರ ಭೇಟಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವನಮಹೋತ್ಸವದಂತಹ ಕಾರ್ಯಕ್ರಮದಿಂದ ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಸದಂತೆ ಜಾಗೃತಿ, ರಾಜ್ಯಪಾಲರ ಘೋಷಣೆಯಾದ ಪ್ರೀತಿಸಿ, ಜಾಗೃತಿ ವಹಿಸಿ, ಹಂಚಿಕೊಳ್ಳಿ ಅದನ್ನು ಆದಷ್ಟು ಅನುಸರಿಸಿ ಸಮಾಜಕ್ಕೆ ಬೆಳಕಾಗಿ ಎಂದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕ ಪೂಳಂಡ. ಎಸ್. ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಪತ್ನಿ ದಮಯಂತಿ ಇದ್ದರು. ಲಯನ್ಸ್ ಅಧ್ಯಕ್ಷ ಕುಂಡ್ಯೋಳAಡ ಗಣೇಶ್ ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಮುಕ್ಕಾಟಿರ ವಿನಯ್, ವಲಯ ರಾಯಭಾರಿ ಅಂಬೇಕಲ್ ನವೀನ್, ವಲಯ ಮಾರ್ಗದರ್ಶಕ ಮೋಹನ್ ರೈ, ಕೇಟೋಳಿರ ರತ್ನ ಚರ್ಮಣ, ಕೋಟೆರ ಡಾ. ಪಂಚಮ್ ತಿಮ್ಮಯ್ಯ, ಎ.ಎಸ್. ಬೋಪಣ್ಣ, ಎ.ಎಸ್. ತಿಮ್ಮಯ್ಯ, ಮೋಹನ್ ಮುದ್ದಪ್ಪ, ಖಜಾಂಚಿ ಎಂ.ಬಿ. ಕುಟ್ಟಪ್ಪ, ಎಂ.ಜೆ.ಎಫ್, ಸಾಬು ಅಯ್ಯಣ್ಣ, ಕೆ.ಎಸ್. ಕುಟ್ಟಪ್ಪ, ಬಿದ್ದಾಟಂಡ ಮೇರಿ ಚೆಟ್ಟಿಯಪ್ಪ, ವಲಯದ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾಂಡAಡ ರೇಖಾ ಪೊನ್ನಣ್ಣ ಪ್ರಾರ್ಥಿಸಿದರು. ಪ್ರಾಂತೀಯ ಅಧ್ಯಕ್ಷರ ಪರಿಚಯವನ್ನು ಕುಂಚೆಟ್ಟಿರ ರೇಷ್ಮಾ ಸುಧಿ ಹಾಗೂ ನಿವೃತ್ತ ಶಿಕ್ಷಕರ ಪರಿಚಯವನ್ನು ಚೌರಿರ ಉದಯ ಮಾಡಿ, ಗಣೇಶ್ ಮುತ್ತಪ್ಪ ಸ್ವಾಗತಿಸಿ, ಕನ್ನಂಬಿರ ಸುಧಿ ತಿಮ್ಮಯ್ಯ ವಂದಿಸಿದರು.