ಅಂಚೆ ಸೇವೆ ವಿಶ್ವದಲ್ಲಿ ಅತ್ಯುತ್ತಮ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ಕೆಲ ವರ್ಷಗಳ ಹಿಂದೆಯAತೂ ಅಂಚೆ ಸೇವೆ ಅನಿವಾರ್ಯವಾಗಿತ್ತು. ಇಂದಿಗೂ ಅದು ಸವಾಲುಗಳ ಮಧ್ಯೆ ಯಶಸ್ವಿಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ೬ ಲಕ್ಷಕ್ಕಿಂತಲೂ ಹೆಚ್ಚು ಸಿಬ್ಬಂದಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಡ್, ಲಕೋಟೆ, ಪತ್ರ, ಪಾರ್ಸೆಲ್, ಸ್ಪೀಡ್ ಪೋಸ್ಟ್ಗಳು ಮುಂತಾದವು ಅಂಚೆ ಇಲಾಖೆಯ ಸೇವೆಗಳಾಗಿವೆ. ಇಂದು ಕಾರ್ಡ್ಗಳ ಬಳಕೆಯು ಅವಶ್ಯಕವೇ ಆಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಸುದ್ದಿ, ಇತರ ಮಾಹಿತಿ, ವಿಷಯ ಮುಂತಾದುವನ್ನು ಕಾರ್ಡ್ನಲ್ಲಿ ಬರೆದು ಬೇಕಾದ ಕಡೆ ಕಳುಹಿಸಬಹುದು. ಲಕೋಟೆಯಲ್ಲಿ ಅಂಚೆ ಚೀಟಿಗಳನ್ನು ಅಂಟಿಸಿ ಕೂಡಾ ವಿಷಯಗಳನ್ನು ಬರೆದು ಕಳುಹಿಸಬಹುದು. ಪತ್ರ, ಪಾರ್ಸೆಲ್‌ಗಳು, ರಿಜಿಸ್ರ‍್ಡ್ ಪತ್ರ, ಲಕೋಟೆಗಳನ್ನು ಕಳುಹಿಸಬಹುದು. ಸ್ಪೀಡ್ ಪೋಸ್ಟ್ಗಳು ಹಲವು ಸಂದರ್ಭಗಳಲ್ಲಿ ನಮಗೆ ಉಪಕಾರಿ ಅನ್ನಿಸಿದೆ. ಬದಲಾದ ಕಾಲದಲ್ಲಿ ಈಗ ಅಂಚೆ ಇಲಾಖೆಯಲ್ಲಿ ಕೆಲ ಸ್ಥಳೀಯ ಉತ್ಪನ್ನ ಗಳು ಮಾರಾಟ ದಲ್ಲಿ ಸಿಗುತ್ತವೆ. ಮಾತ್ರವಲ್ಲ ಇವು ಗಳನ್ನು ದೇಶಾ ದ್ಯಂತ ಪಾರ್ಸೆಲ್ ಗಳ ರೂಪದಲ್ಲಿ ಕಳುಹಿಸ ಬಹುದು. ಅಂಚೆ ಇಲಾಖೆ ಯಲ್ಲಿ ಠೇವಣಿ ಯನ್ನು ಇಡ ಬಹುದು. ಇತರ ಸೇವೆಗಳು ಇಲ್ಲಿ ಲಭ್ಯವಿದೆ. ಕೊರೊನಾ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ಅಂಚೆ ಕಚೇರಿಯಿಂದ ಸೂಕ್ತ ದರಕ್ಕೆ ದೊರಕಿಸಿ ಕೊಡಲಾಗುತ್ತಿತ್ತು. ಇಷ್ಟಲ್ಲದೇ ಹೊಸ ಹೊಸ ರೀತಿಯ ಸೇವೆಗಳನ್ನು ಒದಗಿಸುವತ್ತ ಅಂಚೆ ಇಲಾಖೆ ಕಾರ್ಯ ಪ್ರವೃತ್ತವಾಗುತ್ತಲೇ ಇದೆ.

ಅಂಚೆ ಚೀಟಿಗಳ ಸಂಗ್ರಹವು ಒಂದು ಉತ್ತಮ ಹವ್ಯಾಸವೇ ಆಗಿದೆ. ಇದನ್ನು ಹವ್ಯಾಸಗಳ ರಾಜ ಎನ್ನುತ್ತಾರೆ. ಬಣ್ಣ ಬಣ್ಣದ ಚಿತ್ತಾರದ ದೇಶ - ವಿದೇಶಗಳ ಅಂಚೆ ಚೀಟಿ ಸಂಗ್ರಹ ಒಂದು ಹವ್ಯಾಸವೇ ಆಗಿದ್ದು, ಇದು ಆಯ್ಕೆಯ, ಸಂಗ್ರಹದ ಚುರುಕನ್ನು ಅಭಿವೃದ್ಧಿ ಪಡಿಸುತ್ತದೆ. ಈ ಸಂಗ್ರಹದ ಹವ್ಯಾಸಕ್ಕೆ ವಯಸ್ಸಿನ ಇತಿಮಿತಿ ಇಲ್ಲ. ಶಾಲಾ ಹಂತದಲ್ಲೇ ಈ ಹವ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು.

ಜ್ಞಾನಶಕ್ತಿ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗುವುದು. ಈ ಅಂಚೆ ಚೀಟಿ ಸಂಗ್ರಹಕ್ಕೆ ಹುರುಪಿನಿಂದ ಕಾರ್ಯ ನಿರ್ವಹಿಸಿ ದಾಖಲೆಯ ಮಟ್ಟದಲ್ಲಿ ಅಂಚೆ ಚೀಟಿ ಸಂಗ್ರಹಿಸಿದವರೂ ಇದ್ದಾರೆ. ಈ ಅಂಚೆ ಚೀಟಿಗಳು ಬಹಳಷ್ಟು ಮಾಹಿತಿ, ವಿವರಗಳನ್ನು ಒದಗಿಸುವುದು. ಬಿಡುವಿನ ವೇಳೆಯ ಸದುಪಯೋಗಕ್ಕೆ ಅಂಚೆ ಚೀಟಿ ಸಂಗ್ರಹ ಒಳ್ಳೆಯ ಮಾರ್ಗ. ಅಂಚೆ ಚೀಟಿ ಸಂಗ್ರಹದಿAದ ಹೆಸರು, ಗೆಳೆತನವನ್ನು ಸಂಪಾದಿಸಬಹುದು.

ಅಂಚೆ ಚೀಟಿಗಳಲ್ಲಿ ವ್ಯಕ್ತಿ, ವಸ್ತುಗಳು, ಫಲ-ಪುಷ್ಪ, ಪಶು-ಪಕ್ಷಿ, ಕವಿಗಳು, ಸ್ವಾತಂತ್ರö್ಯ ಹೋರಾಟಗಾರರು ಇತರ ಮಹನೀಯರ ಭಾವಚಿತ್ರ, ರಾಷ್ಟçದ ಧ್ವಜ, ಪಕ್ಷಿ, ಪ್ರಾಣಿ, ಲಾಂಛನ ಮೊದಲಾದ ವಿಶೇಷತೆ ಹೊಂದಿರುವ ಅಂಚೆ ಚೀಟಿಗಳು ಸಂಗ್ರಹಕಾರರಲ್ಲಿ ಲಭ್ಯವಿದೆ.

ಅಂಚೆ ಇಲಾಖೆ ಒದಗಿಸುವ ಸೇವೆಗೆ ಗ್ರಾಹಕರು ಮುಂಗಡವಾಗಿ ಕೊಡುವ ಶುಲ್ಕಕ್ಕೆ ಇಲಾಖೆ ಕೊಡುವ ರಸೀತಿಯೇ ಅಂಚೆ ಚೀಟಿ. ಗ್ರಾಹಕರು ತಾವು ಕಳುಹಿಸುವ ಪತ್ರದ ಮೇಲೆ ಅಂಟಿಸಬೇಕು. ಆಗ ಇಲಾಖೆಯ ಸೇವಾ ಶುಲ್ಕ ಸಂದಾಯವಾಗಿದೆ ಎಂದರ್ಥ. ಅದರ ಮೇಲೆ ಅಂಚೆ ಇಲಾಖೆ ತನ್ನ ಮುದ್ರೆಯನ್ನು ಒತ್ತಿ ರವಾನಿಸುತ್ತದೆ. ಅದು ತಲುಪಬೇಕಾದವರಿಗೆ ತಲುಪುವುದು. ಅಂಚೆ ಕಚೇರಿಯಲ್ಲಿ ಎ.ಟಿ.ಎಂ. ಸೇವೆಯು ಲಭಿಸುವುದು.

ಇಂದು ಅಂಚೆ ಇಲಾಖೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಖಾಸಗಿ ಕೊರಿಯರ್ ಸೇವೆಯ ಪೈಪೋಟಿಯು ಇದೆ. ಇಂದಿಗೂ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಅಂಚೆಯಣ್ಣ, ಪೋಸ್ಟ್ಮ್ಯಾನ್ ಎಲ್ಲರಿಗೂ ಪರಿಚಿತ ವ್ಯಕ್ತಿಯೇ ಆಗಿರುತ್ತಾರೆ. ಅಂಚೆ ಇಲಾಖೆಯ ಸಿಬ್ಬಂದಿಯ ಸೇವೆಯು ಪ್ರಶಂಸಾರ್ಹ. ಅಂಚೆ ಇಲಾಖೆಯು ಇಂದಿಗೂ ವಿಶ್ವಾಸಾರ್ಹ ಇಲಾಖೆಯಾಗೇ ಉತ್ತಮ ಸೇವೆ ಒದಗಿಸುತ್ತಿದೆ. ಅಕ್ಟೋಬರ್ ೯ ಅಂಚೆ ಸೇವಾ ಸಿಬ್ಬಂದಿಯ ದಿನ.

- ಹರೀಶ್ ಸರಳಾಯ, ಮಡಿಕೇರಿ.