ವೀರಾಜಪೇಟೆ, ಅ. ೭: ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಎನ್.ಸಿ.ಸಿ ಸೇರಿದಂತೆ ಇಂತಹ ಹಲವು ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸಹಾಯವಾಗುತ್ತದೆ ಎಂದು ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕಿ ಎ.ಎಂ. ಶೈಲಾ ಅಭಿಪ್ರಾಯ ವ್ಯಕ್ತಪಡಿಸಿಸದರು. ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಎನ್.ಎಸ್.ಎಸ್. ಶಿಬಿರದಲ್ಲಿ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆಗಳಲ್ಲಿ ಕಲಿತಿರುವ ಪಾಠಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪು ಗೊಳ್ಳಬಹುದು ಎಂದು ಹೇಳಿದರು. ಕೊಡಗು ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಅಶ್ವಿತಾ ಬಿ ಹದಿ ಹರೆಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿ ಹದಿ ಹರೆಯದ ವಿದ್ಯಾರ್ಥಿ ಜೀವನದಲ್ಲಿ ಮಾದಕ ಚಟಗಳಿಗೆ ಬಲಿಯಾದರೆ ಅದರಿಂದ ಹೊರ ಬರಲು ಸಾಧ್ಯವಾಗುವುದು ಕಷ್ಟ ಸಾಧ್ಯ. ಇಂದಿನ ದಿನಗಳಲ್ಲಿ ಬಹುತೇಕ ಹದಿಹರೆಯದವರು ಗಾಂಜಾ, ಅಫಿಮುನಂತಹ ಅಮುಲು ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಕ್ಷಣಕ್ಕೆ ಏನೋ ಒಂದು ಸುಖ ಸಿಗುತ್ತದೆ. ಅದೇ ಸುಖ ನಮ್ಮ ಜೀವನವನ್ನು ಬಲಿ ತೆಗೆದುಕೊಳ್ಳುತ್ತದೆ. ಇದರಿಂದ ನಮ್ಮ ಪೋಷಕರು ಹಾಗೂ ಸಮಾಜ ತಲೆ ತಗ್ಗಿಸುವಂತಾಗುತ್ತದೆ. ಸಾಧ್ಯವಾದಷ್ಟು ದುಶ್ಚಟಗಳಿಂದ ದೂರ ಇರುವಂತೆ ಕರೆ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯ ದರ್ಶಿ ವೇಣು ಅಪ್ಪಣ್ಣ ಸಭೆಯನ್ನು ಉದ್ದೇಶಿಸಿ ಮಾತ ನಾಡಿದರು. ವೇದಿಕೆಯಲ್ಲಿ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಟಿ.ಟಿ ಕುಮಾರಸ್ವಾಮಿ, ಏಕದಂತ ಯುವಕ ಸಂಘಟಣೆಯ ಅಧ್ಯಕ್ಷ ಎಂ.ಸಿ ದಿನೇಶ್, ಪ್ರಾಂಶುಪಾಲೆ ದೇವಕ್ಕಿ, ಕಾರ್ಯಕ್ರಮ ಅಧಿಕಾರಿ ದಮಯಂತಿ, ಉಪನ್ಯಾಸಕರಾದ ರೋಹಿಣಿ, ಸರೋಜಿನ ಉಪಸ್ಥಿತರಿದ್ದರು.