ಮಡಿಕೇರಿ, ಅ.೭ : ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಸಿ.ಎಂ ಕಪ್ ವುಶು ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ವುಶು ಸಂಸ್ಥೆಯ ಕ್ರೀಡಾ ಪಟುಗಳು ಸಾನೌಶ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದಿದ್ದಾರೆ.
ಸಂಸ್ಥೆಯ ಕ್ರೀಡಾಪಟುಗಳಾದ ಪಿ.ಆರ್.ಯಶಸ್, ಪಿ.ಬಿ.ಧನುಷ್ ಹಾಗೂ ಎ.ಎಸ್.ಪವನ್ ಕಂಚಿನ ಪದಕ ಪಡೆದುಕೊಂಡರು. ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.