*ಗೋಣಿಕೊಪ್ಪ, ಅ. ೭: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಅಡಿಕೆ ತೋಟದಲ್ಲಿ ಪತ್ತೆಯಾಗಿದೆ. ತಿತಿಮತಿ ಸಮೀಪದ ದೇವರಪುರ ಗ್ರಾಮ ಭದ್ರಗೋಳದಲ್ಲಿ ಈ ಘಟನೆ ನಡೆದಿದ್ದು, ನಾಪತ್ತೆಯಾದ ಮೂಡಗದ್ದೆ ಯಶ್ವಂತ್ (೪೨) ಮೃತಪಟ್ಟ ವ್ಯಕ್ತಿ.

ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಮೃತಪಟ್ಟ ವ್ಯಕ್ತಿಯ ಚಿಕ್ಕಪ್ಪನ ಮಗ ಕಿರಣ್ ಚಿಣ್ಣಪ್ಪ ಎಂಬಾತನನ್ನು ಯಶ್ವಂತ್ ಪತ್ನಿ ಮಲ್ಲಿಕಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಂಧಿಸಿ ಸಾವಿನ ಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಯಶ್ವಂತ್ ಹಾಗೂ ಕಿರಣ್ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ದೇವರಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೋಳ ಗ್ರಾಮದಲ್ಲಿ ಇಬ್ಬರದು ಸಮೀಪದಲ್ಲಿ ಮನೆಗಳಿದ್ದು ಕೌಟುಂಬಿಕ ಜೀವನವನ್ನು ನಡೆಸುತ್ತಿದ್ದಾರೆ.

ಆಸ್ತಿಗಾಗಿ ಈ ಎರಡು ಮನೆಗಳ ನಡುವೆ ದ್ವೇಷ ಇತ್ತು ಎಂದು ಹೇಳಲಾಗುತ್ತಿದೆ. ಈ ಸಂಬAಧ ಅಕ್ಟೋಬರ್ ೩ರಂದು ಕಿರಣ್ ಏಕಾಏಕಿ ಯಶ್ವಂತ್ ಮನೆಗೆ ನುಗ್ಗಿ ಜಗಳವಾಡಿ ಆತನ ಹೆಗಲಪಟ್ಟಿ ಹಿಡಿದು ಎಳೆದೊಯ್ದಿದ್ದ. ಆ ಘಟನೆಯ ನಂತರ ಯಶ್ವಂತ್ ಮನೆಗೆ ಬಂದಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ತಾ. ೪ರಂದು ಪತ್ನಿ ಹಾಗೂ ಮನೆಯವರು ಯಶ್ವಂತ್‌ಗಾಗಿ ಹುಡುಕಾಡಿದ್ದಾರೆ ಎಲ್ಲಿಯೂ ಯಶ್ವಂತ್ ಪತ್ತೆಯಾಗಿಲ್ಲ. ಈ ಕಾರಣದಿಂದ ೫ರಂದು ಗೋಣಿಕೊಪ್ಪ ಪೊಲೀಸ್ ಠಾಣೆಗೆ ಯಶ್ವಂತ್ ಪತ್ನಿ ಮಲ್ಲಿಕಾ ದೂರು ನೀಡಿದ್ದಾರೆ.

ಈ ಸಂಬAಧ ತನಿಖೆ ಕೈಗೊಂಡ ಪೊಲೀಸರಿಗೆ ಶುಕ್ರವಾರ ಬೆಳಿಗ್ಗೆ ಯಶ್ವಂತ್ ಮೃತದೇಹ ಮನೆಯ ಸಮೀಪದ ಅಡಿಕೆ ತೋಟವೊಂದರಲ್ಲಿ ಪತ್ತೆಯಾಗಿದೆ. (ಮೊದಲ ಪುಟದಿಂದ) ತೋಟದ ಕಾರ್ಮಿಕರು ಮೃತದೇಹ ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯಶ್ವಂತ್ ಅವರ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದು ಮತ್ತು ರಾತ್ರಿ ಸಂಚಾರಕ್ಕೆ ಹಣೆಯ ಮೇಲೆ ಕಟ್ಟಿಕೊಳ್ಳುವ ಟಾರ್ಚ್ ಲೈಟ್ ಹಾಗೆ ಉಳಿದುಕೊಂಡ ಸ್ಥಿತಿಯಲ್ಲಿ ದೇಹ ಗೋಚರಿಸಿದ ಹಿನ್ನೆಲೆಯಲ್ಲಿ ಯಶ್ವಂತ್ ಪತ್ನಿ ಮಲ್ಲಿಕಾ ನೀಡಿದ ದೂರಿನ ಆಧಾರದಲ್ಲಿ ಅನುಮಾನಸ್ಪದವಾಗಿ ಪ್ರಾಥಮಿಕ ತನಿಖೆಗೆ ಕಿರಣ್ ಚಿಣ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಸ್ಥಳಕ್ಕೆ ಡಿವೈಎಸ್ಪಿ ನಿರಂಜನ್ ರಾಜ್ ಅರಸ್, ವೃತ್ತನಿರೀಕ್ಷಕ ಗೋವಿಂದರಾಜು, ಭೇಟಿ ನೀಡಿ ಸಂಬAಧಿಸಿದ ಕಾನೂನಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.

- ಎನ್.ಎನ್. ದಿನೇಶ್