ವೀರಾಜಪೇಟೆ, ಅ. ೭: ವೀರಾಜಪೇಟೆ ತಾಲೂಕು ಕ್ರೀಡಾ ತಾಲೂಕಾಗಿದ್ದು ವೀರಾಜಪೇಟೆಯಲ್ಲಿ ಉತ್ತಮ ಕ್ರೀಡಾ ಸೌಲಭ್ಯಕ್ಕಾಗಿ ನಮ್ಮ ಧ್ವನಿ ಎಂಬ ಘೋಷವಾಕ್ಯದೊಂದಿಗೆ ಅಂರ‍್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ತೆಲುಗರ ಬೀದಿಯ ಮಾರಿಗುಡಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಗ್ರೇಡ್ ೨ ತಹಶೀಲ್ದಾರ್ ಪ್ರದಿಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಅಂರ‍್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ ವೀರಾಜಪೇಟೆ ತಾಲೂಕಿನಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅಂದಾಜು ೨೫ ಸಾವಿರ ವಿದ್ಯಾರ್ಥಿಗಳಿದ್ದಾರೆ. ೧೪೦ ಹಾಕಿ ತಂಡಗಳಿವೆ. ೬೦ ಇತರೆ ಕ್ರೀಡಾ ತಂಡಗಳಿವೆ. ರಾಜ್ಯ, ರಾಷ್ಟç, ಅಂರ‍್ರಾಷ್ಟಿçಯ ಮಟ್ಟ, ಒಲಂಪಿಯನ್ ಹಾಕಿ ಆಟಗಾರರಿದ್ದಾರೆ. ಅಥ್ಲೇಟ್‌ಗಳು, ನುರಿತ ಈಜುಗಾರರು ಸೇರಿದಂತೆ ಬಹುಮುಖ ಪ್ರತಿಭೆಯ ಆಟಗಾರರಿದ್ದರೂ ಕೂಡ ಕ್ರೀಡೆಯನ್ನು ಮೇಲ್ದರ್ಜೆಗೆ ಏರಿಸಲು ಯಾವುದೇ ಸೌಕರ್ಯ ಸವಲತ್ತುಗಳಿಲ್ಲ. ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬೇಕಾದರೆ ತರಬೇತಿ ಪಡೆದುಕೊಳ್ಳಲು ಉತ್ತಮ ಮೈದಾನಗಳಿರಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಎಲ್ಲಾ ಕ್ರೀಡೆ ಗಳನ್ನು ನಡೆಸುವ ಪರಿಸ್ಥಿತಿ ಎದು ರಾಗಿದೆ. ಹಾಕಿ ಆಟಕ್ಕೆ ಆಸ್ಟೊçÃಟರ್ಫ್ ಸಿಂಥೇಟಿಕ್ ಟ್ರಾö್ಯಕ್, ಇತರ ಕ್ರೀಡೆ ಗಳನ್ನು ಪ್ರೋತ್ಸಾಹಿಸಲು ಒಳಾಂಗಣ ಕ್ರೀಡಾಂಗಣ ಇಲ್ಲದೆ ಆಟಗಾರರು ಮೈಸೂರು, ಬೆಂಗಳೂರಿಗೆ ತೆರಳುತ್ತಿದ್ದಾರೆ. ಕ್ರೀಡಾ ಪಟುವಿಗೆ ಯಾವುದೇ ಸೌಲಭ್ಯಗಳಿಲ್ಲದೆ ಆತನ ಸ್ವಂತ ಪರಿಶ್ರಮದಿಂದ ರಾಷ್ಟç ಹಾಗೂ ಅಂರ‍್ರಾಷ್ಟಿçಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡರೂ ಜಿಲ್ಲಾಡಳಿತ, ತಾಲೂಕು ಆಡಳಿತ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಇರುವ ಒಂದು ತಾಲೂಕು
(ಮೊದಲ ಪುಟದಿಂದ) ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಯೋವೃದ್ಧರು, ವಾಯುವಿಹಾರ ನಡೆಸಲು ಮೈದಾನಗಳಿಲ್ಲ ಎಂದು ಆರೋಪಿಸಿದರು. ನಮ್ಮ ಮನವಿಗೆ ಸ್ಪಂದನ ದೊರೆಯದಿದ್ದರೆ ಬೇಡಿಕೆ ಈಡೇರುವವರೆಗೆ ನವೆಂಬರ್ ೭ ರಿಂದ ಗಡಿಯಾರ ಕಂಬದ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಬೇಡಿಕೆಗಳು: ಜೂನಿಯರ್ ಕಾಲೇಜಿನ ಒಳಾಂಗಣ ಕ್ರೀಡಾಗಂಣ ಕಳೆದ ೫ ವರ್ಷದಿಂದ ಸ್ಥಗಿತಗೊಂಡಿದೆ. ಇದನ್ನು ಮರು ಆರಂಭಿಸಬೇಕು. ಬಾಸ್ಕೆಟ್ ಬಾಲ್ ಅಂಕಣ ದುರಸ್ತಿ ಪಡಿಸಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಉಚಿತ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಬೇಕು. ತಾಲೂಕು ಮೈದಾನದಲ್ಲಿ ಹೊನಲು ಬೆಳಕಿನ ಕ್ರೀಡಾಕೂಟ ನಡೆಸಲು ಅನುಮತಿ ಹಾಗೂ ವ್ಯವಸ್ಥೆ ಆಗಬೇಕು. ಪುರಸಭೆಯಿಂದ ಕ್ರೀಡೆಗಳಿಗೆ ಅನುದಾನ ನಿಗಧಿಪಡಿಸಬೇಕು. ಪುರಸಭೆ ಅಧೀನದಲ್ಲಿ ಅಂರ‍್ರಾಷ್ಟಿçಯ ಕ್ರೀಡಾಪಟುಗಳು ಹಾಗೂ ಸ್ಥಳೀಯ ಕ್ರಿಡಾಪಟುಗಳನ್ನು ಸೇರಿಸಿ ಕ್ರೀಡಾ ಬೆಳವಣಿಗೆ ಸಮಿತಿ ರಚಿಸಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಉಚಿತ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಬೇಕು. ಆಸ್ಟೊçÃಟರ್ಫ್, ಕಾಲ್ಚೆಂಡು ಪಂದ್ಯಾಟಕ್ಕೆ ಕೃತಕ ಟರ್ಫ್ ಹಾಗೂ ಸಿಂಥೇಟಿಕ್ ಹಾಗೂ ಸಿಂಥೇಟಿಕ್ ಟ್ರಾö್ಯಕ್ ಮತ್ತು ಸ್ವಿಮಿಂಗ್ ಪೂಲ್ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ೭೦ಕ್ಕೂ ಅಧಿಕ ಕ್ರಿಡಾಪಟುಗಳು ಭಾಗವಹಿಸಿದ್ದರು.