ಭಾಗಮಂಡಲ, ಅ. ೬: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಂದು ಭಾಗಮಂಡಲದಲ್ಲಿ ಕಟ್ಟು ವಿಧಿಸುವ ಕಾರ್ಯ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಭಗಂಡೇಶ್ವರ ದೇವಾಲಯ ತಕ್ಕರು ಹಾಗೂ ತಲಕಾವೇರಿ ದೇವಾಲಯ ತಕ್ಕರು ಗ್ರಾಮದ ಹಿರಿಯರು ಹಾಗೂ ನಾಲ್ಕು ಗ್ರಾಮದ ದೇವಾಲಯಗಳ ತಕ್ಕ ಮುಖ್ಯಸ್ಥರು ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದಸ್ವರ ಮೆರವಣಿಗೆ ಮೂಲಕ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ ಕಟ್ಟಿ (ಕಟ್ಟು ಬೀಳುವುದು) ಆಜ್ಞಾ ಮುಹೂರ್ತ ಮಾಡಲಾಯಿತು. ಬೆಳಿಗ್ಗೆ ೯.೩೫ ಕ್ಕೆ ಆಜ್ಞಾ ಮುಹೂರ್ತ ನೆರವೇರಿತು. ನಂತರ ದೇವಾಲಯದಲ್ಲಿ ತಪ್ಪಡ್ಕ ಕಟ್ಟಿ. ಜಾತ್ರಾ ಕಾರ್ಯಕ್ರಮವು ಸುಸೂತ್ರವಾಗಿ ನಡೆಯುವಂತೆ ಪ್ರಾರ್ಥನೆ ಮಾಡಲಾಯಿತು.

(ಮೊದಲ ಪುಟದಿಂದ) ಅಕ್ಟೋಬರ್ ೧೪ರಂದು ಶನಿವಾರ ಮಧ್ಯಾಹ್ನ ೧೧.೪೫ ಗಂಟೆ ಐದು ನಿಮಿಷಕ್ಕೆ ಕುಂಭ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವುದು ೪.೧೫ಕ್ಕೆೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯಕ್ರಮಗಳು ನಡೆಯಲಿವೆ. ಇಂದಿನಿAದ ನಾಡಿನಲ್ಲಿ ಮಾಂಸ ಸೇವನೆ, ಮರ ಕಡಿಯುವುದು, ಬಲಿ ಹಿಂಸಾಕೃತ್ಯಗಳು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿರ್ಬಂಧವಿರುತ್ತದೆ. ಈ ಸಂದರ್ಭ ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ತಲಕಾವೇರಿ ದೇವಾಲಯ ತಕ್ಕದಾದ ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ರವಿ ಹೆಬ್ಬಾರ್, ಭಾಗಮಂಡಲ ಗ್ರಾಮಸ್ಥರು ಭಾಗವಹಿಸಿದ್ದರು ಸ್ಥಳೀಯ ದೇವಾಲಯದ ತಕ್ಕರಾದ ಶಿರಕಜ್ಜೆ ಸುಂದರ ತಾವೂರಿನ ಮಹಿಷಾಸುರ ಮರ್ದಿನಿ ದೇವಾಲಯದ ಅಧ್ಯಕ್ಷರಾದ ಹೊಸಗದ್ದೆ ಭಾಸ್ಕರ, ಕುದುಪಜೆ ಪ್ರಕಾಶ್ ಕುದುಕುಳಿ ಭರತ್ ಪಿ.ಎಮ್ ರಾಜೀವ್, ನಿಡ್ಯಮಲೆ ರವಿ, ಪಾರುಪತ್ತೆದಾರರಾದ ಪೊನ್ನಣ್ಣ, ಅರ್ಚಕರಾದ ಹರೀಶ್ ಭಟ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

ನಿಷೇಧ: ಇಂದಿನಿAದ ಅಕ್ಟೋಬರ್ ೧೭ ರ ತೀರ್ಥೋದ್ಭವದ ವರೆಗೆ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು ಎಲ್ಲಾ ಮೀನು ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚುವಂತೆ ತೆರೆದ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ಅಲ್ಲದೆ ಹೋಟೆಲ್‌ಗಳಲ್ಲಿ ಮಿನು ಮಾಂಸ ಮಾಡದಂತೆ ಗ್ರಾಮ ಪಂಚಾಯತ್ ವತಿಯಿಂದ ನೋಟಿಸು ನೀಡಲಾಗಿದೆ. ನಿಯಮವನ್ನು ಉಲ್ಲಂಘಿಸಿದಲ್ಲಿ ಲೈಸೆನ್ಸ್ ಅನ್ನು ರದ್ದುಪಡಿಸಲಾಗುವು ದೆಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

-ಸುನಿಲ್ ಕುಯ್ಯಮುಡಿ