ಪೆರಾಜೆ, ಅ. ೭: ಶ್ರೀ ಶಾಸ್ತಾವು ಅಟೋ ಚಾಲಕ ಸಂಘ ಪೆರಾಜೆ ಘಟಕದ ೨೦೨೨-೨೦೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಕೊಡ್ಯಗುಂಡಿ, ಉಪಾಧ್ಯಕ್ಷರಾಗಿ ಅಬೂಬೂಕ್ಕರ್ (ಔಕು) ಅವರನ್ನು ಎರಡನೇ ಅವಧಿಗೆ ಪುನಾರಾಯ್ಕೆ ಮಾಡಲಾಯಿತು. ಶ್ರೀ ಶಾಸ್ತಾವು ದೇವಸ್ಥಾನದ ಸಭಾಂಗಣದಲ್ಲಿ, ಸುಳ್ಯ ತಾಲೂಕು ಆಟೋ ಚಾಲಕರ ಸಂಘ ಬಿ.ಎಂ.ಎಸ್ ಸಂಯೋಜಿತ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷÀ್ಣ ಬೈತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ಮಾಡಲಾಯಿತು. ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಈ ಸಂದರ್ಭ ಇತ್ತೀಚೆಗೆ ಆಟೋ ಅಪಘಾತದಲ್ಲಿ ಗಾಯಗೊಂಡ ಆಶ್ರಫ್ ಪಿ.ಎಂ. ಹಾಗೂ ಜಿತನ್ ಅಡ್ಕ ಅವರುಗಳಿಗೆ ತಾಲೂಕು ಘಟಕ ಹಾಗೂ ಪೆರಾಜೆ ಘಟಕದ ವತಿಯಿಂದ ಪರಿಹಾರಧನ ನೀಡಲಾಯಿತು. ಈ ಸಂದರ್ಭ ತಾಲೂಕು ಆಟೋ ಚಾಲಕ ಘಟಕದ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ಸೇರಿದಂತೆ ಪೆರಾಜೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಅಬೂಬೂಕ್ಕರ್ ಸ್ವಾಗತಿಸಿ ಹರ್ಷಿತ್ ಮಜಿಕೋಡಿ ವಂದಿಸಿದರು.