ಗೋಣಿಕೊಪ್ಪಲು, ಅ. ೭: ದಕ್ಷಿಣ ಕೊಡಗಿನಲ್ಲಿ ಹುಲಿಯ ಆರ್ಭಟಕ್ಕೆ ಸಿಲುಕಿ ರೈತರ ಜಾನುವಾರುಗಳು ದಿನಕ್ಕೊಂದರAತೆ ಬಲಿಯಾಗುತ್ತಿವೆ. ಇದೀಗ ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ತೀತಿರ ಸದಾ ಎಂಬುವರ ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ಎಮ್ಮೆಗಳನ್ನು ಹುಲಿಯು ದಾಳಿ ನಡೆಸಿ ಬಲಿ ಪಡೆದುಕೊಂಡಿದೆ.

ದಕ್ಷಿಣ ಕೊಡಗು ಭಾಗದಲ್ಲಿ ವ್ಯಾಘ್ರ ಅಟ್ಟಹಾಸ ಮಿತಿಮೀರಿದ್ದು, ಅರಣ್ಯ ಇಲಾಖೆ ಹುಲಿ ದಾಳಿ ತಡೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಹಾಗೂ ರೈತ ಸಂಘ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.

ಗ್ರಾಮದಲ್ಲಿ ಹುಲಿಯ ಸಂಚಾರವಿರುವುದರಿAದ ಕಾಫಿ ತೋಟದ ಕೆಲಸಕ್ಕೆ ಅಡ್ಡಿ ಆಗುತ್ತಿದೆ, ನಾಗರಿಕರು ಭಯದ ನೆರಳಲ್ಲಿ ವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದು ಬೆಳಿಗ್ಗೆಯಿಂದಲೇ ಹರಿಹರ ಗ್ರಾಮದ ರೈತರ ತೋಟದ ಬಳಿ ಹಲವಾರು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು.

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸದೇ ಪ್ರತಿಭಟನೆ ಹಿಂದಕ್ಕೆ ತೆಗೆಯಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ತಮ್ಮ ಹೋರಾಟ ಸಂಜೆಯ ತನಕ ಮುಂದುವರಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಡಿಕೇರಿ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ, ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ, ತಿತಿಮತಿ ಎಸಿಎಫ್ ನೆಹರು, ಆರ್.ಎಫ್.ಓ. ಶಂಕರ್, ಡಿಆರ್‌ಎಫ್‌ಓ ಗಣೇಶ್, ಪೊನ್ನಂಪೇಟೆಯ ದಿವಾಕರ್, ಮತ್ತಿತರ ಅಧಿಕಾರಿಗಳು ಹರಿಹರ ಗ್ರಾಮಕ್ಕೆ ಆಗಮಿಸಿದರು. ಹಿರಿಯ ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ

(ಮೊದಲ ಪುಟದಿಂದ) ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರಹಾಕಿದರಲ್ಲದೇ, ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಹುಲಿಯ ಸೆರೆಗೆ ಕಠಿಣ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ರೈತ ಸಂಘದ ವತಿಯಿಂದ ಗಡಿ ಬಂದ್ ಹೋರಾಟ ಮಾಡಲಾಗುತ್ತದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಈ ಸಂದರ್ಭ ಎಚ್ಚರಿಸಿದರು.

ಜಾನುವಾರು ಕಳೆದುಕೊಂಡ ರೈತನಿಗೆ ತಕ್ಷಣ ಪರಿಹಾರ ನೀಡುವಂತೆ ರೈತ ಸಂಘದ ಪದಾಧಿಕಾರಿಗಳು ಪಟ್ಟು ಹಿಡಿದರು. ಈ ವೇಳೆ ರೈತರನ್ನು ಸಮಾಧಾನ ಪಡಿಸಿದ ಪಿ.ಸಿ.ಎಫ್. ಮೂರ್ತಿ ಶನಿವಾರ ಬೆಳಿಗ್ಗೆ ಪರಿಹಾರದ ಚೆಕ್ ನೀಡುವ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು.

ಈ ವೇಳೆ ರೈತ ಸಂಘದ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಹುದಿಕೇರಿ ಹೋಬಳಿ ನಿಕಟಪೂರ್ವ ಅಧ್ಯಕ್ಷ ಚಂಗುಲAಡ ಸೂರಜ್, ತಾಣಚ್ಚಿರ ಲೇಹರ್ ಬಿದ್ದಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಚಿಮ್ಮುಣಿರ ಜೀವನ್, ತೀತಿರ ಸದಾ ಬೋಪಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಚಿತ್ರ-ವರದಿ : ಹೆಚ್.ಕೆ.ಜಗದೀಶ್