ಮಡಿಕೇರಿ, ಅ. ೭: ೨೦೨೨ರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ೧:೨ ರಂತೆ ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಯು ಮಡಿಕೇರಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿ (ಆಡಳಿತ) ಯಲ್ಲಿ ನಡೆಯಲಿದೆ. ತಾತ್ಕಾಲಿಕ ಪಟ್ಟಿಯಲ್ಲಿನ ಅಭ್ಯರ್ಥಿಗಳು ವೇಳಾಪಟ್ಟಿಯಲ್ಲಿರುವ ದಿನಾಂಕಗಳAದು ಖುದ್ದಾಗಿ ಹಾಜರಾಗುವಂತೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕಚೇರಿಯ ನೋಡಲ್ ಅಧಿಕಾರಿ ಕೆ.ಆರ್. ಬಿಂದು (೯೬೧೧೭೨೦೩೨೦) ಹಾಗೂ ವಿಷಯ ನಿರ್ವಾಹಕರಾದ ಹೆಚ್.ಎಸ್. ಮಂಜು (೯೪೪೯೯೫೨೦೫೪) ಅವರನ್ನು ಸಂಪರ್ಕಿಸಬಹುದು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿ(ಆಡಳಿತ)ಯಲ್ಲಿ ತಾ. ೧೦ ರಂದು ಸಮಾಜ ಪಾಠಗಳು (ಕನ್ನಡ ಮಾಧ್ಯಮ) ೪೫ ಅಭ್ಯರ್ಥಿಗಳಿಗೆ, ತಾ. ೧೧ ರಂದು ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ) ದ ೫೩ ಅಭ್ಯರ್ಥಿಗಳಿಗೆ ಆಯಾಯ ದಿನಗಳಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ, ಮಧ್ಯಾಹ್ನ ೨ ಗಂಟೆಯಿAದ ಸಂಜೆ ೪.೩೦ ರವರೆಗೆ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ ಅವರು ತಿಳಿಸಿದ್ದಾರೆ.