ಕಡಂಗ, ಅ. ೭: ಅರಪಟ್ಟು ಮತ್ತು ಕರಡ ಸಹಕಾರ ವಿವಿಧೋದ್ದೇಶ ದವಸ ಭಂಡಾರ ಇದರ ೮೧ನೇ ವಾರ್ಷಿಕ ಮಹಾಸಭೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನಂಬಿಯಪAಡ ಮಣಿ ಅಯ್ಯಮ್ಮ ಅಧ್ಯಕ್ಷತೆಯಲ್ಲಿ ನಡೆಸಲಾಯಿತು..

ಈ ಭಾಗದ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಮತ್ತು ಕ್ರಿಮಿ ನಾಶಕ ವಿತರಿಸಲು ಕ್ರಮ ಕೈಗೊಳ್ಳುವಂತೆ, ಸಂಘದ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಕೊಡಲು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ ಬಗ್ಗೆ ಸಂಘದ ಮಹಾಸಭೆಯಲ್ಲಿ ಹಾಜರಾದ ಸದಸ್ಯರು ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯರನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮುಕ್ಕಾಟಿರ ಕಿರಣ್ ಬೋಪಯ್ಯ, ನಿರ್ದೇಶಕರಾದ ಬೇಪಡಿಯಂಡ ಕಟ್ಟಿ ಸುಬ್ಬಯ್ಯ, ಕೋಡಿರ ಡಾಲಿ ಸುಬ್ರಮಣಿ, ನೇರ್ಪಂಡ ದೀನಾ ನಾಣಯ್ಯ, ಧೈರ್ಯ ಭೀಮಯ್ಯ, ವಿಠಲ, ಕಸ್ತೂರಿ ಹಾಜರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಯು. ಮಹಮ್ಮದ್ ವಂದಿಸಿದರು.