ಸಿದ್ದಾಪುರ, ಅ. ೬: ಹಾಡಹಗಲೇ ಕಾಡಾನೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ವ್ಯಕ್ತಿಯ ಸ್ಕೂಟಿಯನ್ನು ಸಂಪೂರ್ಣ ಜಖಂಗೊಳಿ ಸಿರುವ ಘಟನೆ ಬಾಡಗಬಾಣಂಗಾಲ ಗ್ರಾಮದ ಮಠದಲ್ಲಿ ನಡೆದಿದೆ. ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಡಗಬಾಣಂಗಾಲ ಗ್ರಾಮದ ಮಠದ ನಿವಾಸಿಯಾಗಿರುವ ವಿಜು ಎಂಬವರು ಗುರುವಾರದಂದು ಬೆಳಿಗ್ಗೆ ೮.೩೦ ರ ಸಮಯಕ್ಕೆ ತಮ್ಮ ಆಕ್ಟೀವಾ ಸ್ಕೂಟಿ ಸಂಖ್ಯೆ (ಕೆ.ಎ೧೨-ವಿ ೧೨೫೮)ರಲ್ಲಿ ನೆಲ್ಯಹುದಿಕೇರಿಗೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮನೆಯ ಅನತಿ ದೂರದ ಕಾಫಿ ತೋಟವೊಂದರಿAದ ಹಠಾತ್ತನೆ ರಸ್ತೆಗೆ ಬಂದ ಕಾಡಾನೆಯು ವಿಜು ಅವರನ್ನು ಕಂಡ ಕೂಡಲೇ ದಾಳಿ ನಡೆಸಲು ಮುಂದಾಯಿತು. ಇದರಿಂದ ಭಯಗೊಂಡ ವಿಜು ದಾಳಿಯಿಂದ ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾದರು. ವಿಜು ಭಯದಿಂದ ಓಡಿದಾಗ ಕೋಪಗೊಂಡ ಕಾಡಾನೆಯು ಸ್ಕೂಟಿಯ ಮೇಲೆ ದಾಳಿ ನಡೆಸಿ ಕಾಲಿನಿಂದ ತುಳಿದು ಜಖಂಗೊಳಿಸಿದೆ. ಅದೃಷ್ಟವಶಾತ್ ವಿಜು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಬಗ್ಗೆ ವಿಜುರವರು ತಿತಿಮತಿ ವಲಯ ಅರಣ್ಯಾಧಿಕಾರಿಯವರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಡಗಬಾಣಂಗಾಲ ಗ್ರಾಮದ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವಾಸು