*ಸಿದ್ದಾಪುರ, ಅ.೭ : ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ತೋಟ ಹಾಗೂ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಭಾರೀ ನಷ್ಟ ಉಂಟು ಮಾಡುತ್ತಿವೆ.
ಕಳೆದೆÆಂದು ವಾರದಿಂದ ಬೀಡು ಬಿಟ್ಟಿರುವ ಕಾಡಾನೆಗಳು ಕೃಷಿಕರಾದ ಕೆ.ಎಂ.ಚAದ್ರಶೇಖರ್ ಹಾಗೂ ಬೆಟ್ಟದಕಾಡು ರಮೇಶ್ ಎಂಬುವವರ ಅಡಿಕೆ ತೋಟ ಮತ್ತು ಭತ್ತದ ಗದ್ದೆಗೆ ನುಗ್ಗಿ ಹಾನಿ ಮಾಡಿವೆ. ಫಸಲು ಬಿಡಲು ಸಿದ್ಧವಾಗಿದ್ದ ಅಡಿಕೆ ಮರಗಳು ನೆಲಕಚ್ಚಿವೆ.
ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಕೃಷಿಕ ವರ್ಗ ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆಹಾನಿ ನಿರಂತರವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪರಿಹಾರದ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ. ಇದೀಗ ಮತ್ತೆ ಬೆಳೆನಾಶವಾಗಿದ್ದು, ಕಳೆದ ಬಾರಿಯ ಪರಿಹಾರವೇ ಬಿಡುಗಡೆಯಾಗದೇ ಇರುವಾಗ ಪುನ: ಅರ್ಜಿ ಸಲ್ಲಿಸಿ ಏನು ಪ್ರಯೋಜನ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ವನ್ಯಜೀವಿಗಳ ಉಪಟಳ ತಡೆಗೆ ಶಾಶ್ವತ ಪರಿಹಾರವನ್ನು ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.