ಸುಂಟಿಕೊಪ್ಪ: ಯಾವುದೇ ಧರ್ಮ, ಜಾತಿ ಎಂಬ ಭೇದ ಭಾವ ತೋರದೆ ಮಾನವೀಯತೆಯ ಸೇವೆಯನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಸುಂಟಿಕೊಪ್ಪ ಮದರಸದ ಧರ್ಮಗುರುಗಳಾದ ಸಿ.ಎಂ.ಹಮೀದ್ ಮೌಲ್ವಿ ಹೇಳಿದರು.

ಇಲ್ಲಿನ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಆಯುಧ ಪೂಜಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಶೀರ್ವಚನ ನೀಡಿದ ಅವರು ಭಾರತೀಯರಲ್ಲಿ ಇರುವ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಯಿಂದಾಗಿ ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ, ಇದು ನಮ್ಮ ಸಂಸ್ಕೃತಿ, ಸಂಪ್ರದಾಯವಾಗಿದೆ. ಹಾಗೆಯೇ ಹಿಂದೂ,

(ಮೊದಲ ಪುಟದಿಂದ) ಮುಸ್ಲಿಂ, ಕ್ರೆöÊಸ್ತರು ಎಂಬ ಬೇಧ ಭಾವ ಮಾಡದೇ ನಾವೆಲ್ಲ ಭಾರತೀಯರು ಎಂಬ ಮನೋಭಾವನೆಯಿಂದ ಜೀವನ ಸಾಗಿಸಿದರೆ ಎಲ್ಲೂ ಜಾತಿ, ಧರ್ಮದ ಬಗ್ಗೆ ಸಂಘರ್ಷಗಳು ಕಂಡು ಬರುವುದಿಲ್ಲ. ತಪಸ್ವಿಗಳ, ಸಂತರ, ಸೂಫಿಗಳ ತಪಸ್ಸಿನ ಫಲವಾಗಿ ಇಂದು ನಾವು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ನಮ್ಮ ದೇಶದ ಸಂವಿಧಾನವನ್ನು ಅರಿತು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ಆಟೋ ಚಾಲಕರು ಎಲ್ಲರನ್ನು ಒಂದುಗೂಡಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸುಂಟಿಕೊಪ್ಪ ಕ್ರೆöÊಸ್ತ ದೇವಾಲಯದ ಧರ್ಮಗುರು ಅಮೃತರಾಜ್ ಮಾತನಾಡಿ, ಸಂಸ್ಕಾರ ಹಿರಿಯ ಪೀಳಿಗೆಗಳು ಬಿಟ್ಟು ಹೋಗಿರುವ ಬಳುವಳಿಯಾಗಿದ್ದು, ಅನ್ಯೋನ್ಯತೆಯಿಂದ, ಮಾನವೀಯ ಮೌಲ್ಯಗಳಿಂದ ಧರ್ಮ ಉಳಿಯಲಿದೆ. ಹಾಗೆಯೇ ಪರಿಸರ ಉಳಿಯಲಿದೆ ಎಂದರು. ಭೂಮಿಯಲ್ಲಿ ಎಲ್ಲವು ನಮಗೆ ದೇವರು ನೀಡಿದ ವರದಾನವಾಗಿದೆ