ವೀರಾಜಪೇಟೆ, ಅ. ೪: ಕೊಡಗಿನ ಆಯುಧಗಳ ಹಬ್ಬವೆಂದೇ ಬಿಂಬಿತವಾಗಿರುವ ಕೈಲ್‌ಪೊಳ್ದ್ ನಮ್ಮೆಯ ಒತ್ತೊರ್ಮೆ ಕೂಟವನ್ನು ಕೊಡವ ಪೊಮ್ಮಕ್ಕಡ ಕೂಟ ವೀರಾಜಪೇಟೆ ಇವರ ವತಿಯಿಂದ ವೀರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಆಚರಿಸಲಾಯಿತು.
ಮೊದಲಿಗೆ ಒಕ್ಕೂಟದ ಸದಸ್ಯೆ ಅಲ್ಲಪಂಡ ತಾರ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಹಬ್ಬದ ಮಹತ್ವದ ಕುರಿತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ಪ್ರಭಾವ ನಮ್ಮ ಸಂಪ್ರದಾಯಗಳ ಮೇಲೆ ಬೀರಿ ಅಂದಿನ ಸಂಭ್ರಮ ಇಂದು ಕೇವಲ ಸಾಂಕೇತಿಕತೆಗೆ ಮಾತ್ರ ಸೀಮಿತವಾಗಿದೆ ಎಂದು ವಿಷಾದಿಸಿದರು.
ಕೊಡವರು ಅಥವಾ ಕೊಡಗಿನಲ್ಲಿ ವಾಸಿಸುವ ಸಾಂಪ್ರದಾಯಿಕರು ಎಲ್ಲರು ಈ ಹಬ್ಬವನ್ನು ಆಚರಿಸುತ್ತಿದ್ದು, ಈಗ ಸಾಂಕೇತಿಕವಾಗಿ ಅಷ್ಟೇ ಈ ಹಬ್ಬ ಆಚರಣೆಯಾಗುತ್ತಿದೆ. ಕೈಲ್ ಮುಹೂರ್ತದ ಒಂದು ಭಾಗವಾಗಿ ಊರಿನ ಎಲ್ಲರು ಒಂದೆಡೆ ‘ಮಂದ್'ನಲ್ಲಿ ಸೇರುವುದು. ಅಲ್ಲಿ, ಅನೇಕ ಆಟೋಟ ಸ್ಪರ್ಧೆಗಳಲ್ಲಿ ಹೆಂಗಸರು, ಗಂಡಸರು, ಮಕ್ಕಳು ಪಾಲ್ಗೊಳ್ಳುವುದು ಈಗಲೂ ವಿರಳ ವಾಗಿಯಾದರು ಕಾಣಬಹುದಾಗಿದೆ ಎಂದು ಹೇಳಿದರು.
ವಿವಿಧ ರೀತಿಯ ಸಾಂಸ್ಕöÈತಿಕ ಹಾಗೂ ಕ್ರೀಡಾ ಪೈಪೋಟಿ ನಡೆಯಿತು. ಸಾಂಸ್ಕöÈತಿಕ ಕಾರ್ಯಕ್ರಮವನ್ನು ಸಲಹಾ ಸಮಿತಿ ಸದಸ್ಯೆ ಕುಪ್ಪಂಡ ಪುಷ್ಪ ಮುತ್ತಣ್ಣ ಹಾಗೂ ವಿಶೇಷವಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಪೈಪೋಟಿಯಲ್ಲಿ ಹಗ್ಗಜಗ್ಗಾಟ ಪೈಪೋಟಿಯನ್ನು ಒಕ್ಕೂಟದ ಸದಸ್ಯೆ ಬಿದ್ದಂಡ ರಾಣಿ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಕಾಳಕ್ಕ ತಂಡ ಪ್ರಥಮ, ಅಪುö್ಪಮಣಿಯಂಡ ಡೇಝಿ ನಾಯಕತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸ ಲಾಯಿತು. ಕೊನೆಗೆ ಸಾಂಪ್ರಾದಾಯಿಕ ಕೊಡವ ವಾಲಗತಾಟ್ ಪ್ರದರ್ಶನ ಗೊಂಡಿತು. ಒಕ್ಕೂಟದ ಸದಸ್ಯೆಯರು ವಿವಿಧ ರೀತಿಯ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಜಿಸಿದರು. ವಿವಿಧ ರೀತಿಯ ಭಕ್ಷö್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಕುಪ್ಪಂಡ ಪುಷ್ಪ ಮುತ್ತಣ್ಣ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಖಜಾಂಚಿ ತಾತಂಡ ಯಶು ಕಬೀರ್, ಸಹ ಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್ ಉಪಸ್ಥಿತರಿದ್ದರು.
ನಾಯಕಂಡ ಬೇಬಿ ಚಿಣ್ಣಪ್ಪ ಪ್ರಾರ್ಥಿಸಿ, ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.