ಮಡಿಕೇರಿ, ಅ. ೪: ವೀರಾಜಪೇಟೆ ಬಾಳುಗೋಡುವಿನಲ್ಲಿ ನಡೆದ ಕೊಡವ ಸಮಾಜ ಒಕ್ಕೂಟದ ಸಭೆಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯದ ಜೀವ ವೈವಿಧ್ಯ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಂಡ ನಾಪಂಡ ರವಿ ಕಾಳಪ್ಪ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಉಪಾಧ್ಯಕ್ಷ ಮಲಚ್ಚೀರ ಬೋಸ್, ಕರವಟ್ಟೀರ ಪೆಮ್ಮಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಎಂ.ಎಲ್.ಸಿ. ಮಂಡೇಪAಡ ಸುಜಾ ಕುಶಾಲಪ್ಪ ಇವರುಗಳು ಇದ್ದರು.