ಹೆಬ್ಬಾಲೆ, ಅ. ೪: ಸೋಮವಾರಪೇಟೆ ಅರಣ್ಯ ವ್ಯಾಪ್ತಿಯಲ್ಲಿ ಬರುವ ಆದಿವಾಸಿ ಸಮುದಾಯ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಗೋಣಿಮರೂರು ಸಮುದಾಯ ಭವನದಲ್ಲಿ ಜೇನು ಸಾಕಾಣಿಕೆ ಕುರಿತ ತರಬೇತಿ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಜೇನು ಸಂಶೋಧನಾ ಸಂಪನ್ಮೂಲ ವ್ಯಕ್ತಿ ಶ್ರೀಅಪೂರ್ವ ಅವರು ಜೇನು ಸಾಕಾಣಿಕೆ ಅವುಗಳ ಪಾಲನೆ, ಪೋಷಣೆ ಹಾಗೂ ಇಳುವರಿ ಮತ್ತು ಆದಾಯದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಈ ಸಂದರ್ಭ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ನಿರಂಜನ್ ಮೂರ್ತಿ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್, ವಲಯ ಅರಣ್ಯಾಧಿಕಾರಿ ಹೆಚ್.ಪಿ. ಚೇತನ್, ಉಪವಲಯ ಅರಣ್ಯಾಧಿಕಾರಿಗಳಾದ ರಾಕೇಶ್, ಹೆಚ್.ಎಂ. ಸತೀಶ್‌ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗೋವಿಂದರಾಜ್ ಕಾರ್ಯಕ್ರಮ ನಿರೂಪಿಸಿದರು.