ಗೋಣಿಕೊಪ್ಪಲು, ಅ. ೪: ಗೋಣಿಕೊಪ್ಪಲುವಿನ ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿ ವತಿಯಿಂದ ೩೩ ವರ್ಷದ ದಸರಾ ಆಚರಣೆ ಅಂಗವಾಗಿ ಅನ್ನದಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಸರ್ವ ಧರ್ಮಿಯರ ಸಹಯೋಗದಲ್ಲಿ ಆಯುಧ ಪೂಜಾ ದಿನದಂದು ಸಾವಿರಾರು ಮಂದಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಿತಿಯ ಅಧ್ಯಕ್ಷ ಕರ್ಣರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅತಿಥಿಗಳಾಗಿ ದಾನಿಗಳಾದ ಎಂ.ಜಿ. ಮೋಹನ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರಾದ ಕುಪ್ಪಂಡ ತಿಮ್ಮಯ್ಯ, ಶಾಂತರಾಮ್ ಕಾಮತ್, ಪ್ರಮೋದ್ ಗಣಪತಿ, ಎಂ. ಮಂಜುಳ, ಸರಿತ, ನಾಮೇರ ಅಂಕಿತ್, ಸುರೇಶ್ ರೈ, ಕೆ. ರಾಜೇಶ್, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಈ ಸಂದರ್ಭ ಸಮಿತಿಯ ಕಾರ್ಯಧ್ಯಕ್ಷ ಅಬ್ದುಲ್ ಜಲೀಲ್, ಉಪಾಧ್ಯಕ್ಷ ಸಚಿನ್, ಖಜಾಂಜಿ ಎಂ.ಆರ್. ರಫೀಕ್, ಪದಾಧಿಕಾರಿಗಳಾದ ಅಬ್ದುಲ್ ಸಮ್ಮದ್, ಅಸ್ಗರ್, ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಅಬ್ದುಲ್ ಜಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಬ್ದುಲ್ ಸಮ್ಮದ್ ಸ್ವಾಗತಿಸಿ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಸಮಿತಿ ವತಿಯಿಂದ ಸಮಾಜ ಸೇವಕರಾದ ಶಾಂತರಾಮ್ ಕಾಮತ್ ಹಾಗೂ ಕುಪ್ಪಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.