*ಗೋಣಿಕೊಪ್ಪ, ಅ. ೪: ಆಯುಧಪೂಜೆ ಪ್ರಯುಕ್ತ ಗೋಣಿಕೊಪ್ಪಲು ವಾಹನ ಚಾಲಕರ ಸಂಘ, ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಆಶ್ರಯದಲ್ಲಿ ಗ್ರೀಸ್ ಹಚ್ಚಿದ ಕಂಬ ಹತ್ತು ಸ್ಪರ್ಧೆ ನಡೆಸಲಾಯಿತು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಬೆಳಿಗ್ಗಿನಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಆಟೋ ಚಾಲಕರು ಹಾಗೂ ವಾಹನ ಚಾಲಕರು ಸಂಭ್ರಮಿಸಿದರು. ನಾಗರಹೊಳೆ ಅಮ್ಮಾಳಮ್ಮ ತಂಡದಿAದ ಬುಡಕಟ್ಟು ನೃತ್ಯ ನಡೆಸಿ ನೆರೆದ ಕಲಾ ಪ್ರಿಯರಿಗೆ ರಸದೌತಣವನ್ನು ನೀಡಿತು.

ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ಸದಸ್ಯರುಗಳಾದ ಸೌಮ್ಯಬಾಲು, ಗೀತಾ, ವೃತ ನಿರೀಕ್ಷಕ ಗೋವಿಂದರಾಜು, ಬುಡಕಟ್ಟು ನೃತ್ಯ ಹಾಗೂ ಕಂಬ ಹತ್ತು ಸ್ಪರ್ಧೆಗೆ ಜಂಟಿಯಾಗಿ ಚಾಲನೆ ನೀಡಿದರು.

ನಂತರ ಸಂಜೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣ ವಾಗಿರುವ ಕಾವೇರಿ ಕಲಾವೇದಿಕೆಯಲ್ಲಿ ಬೆಂಗಳೂರಿನ ಮಧುರ ಮ್ಯೂಸಿಕ್ ಇವೆಂಟ್ಸ್ ತಂಡದಿAದ ಸಂಗೀತ ರಸ ಮಂಜರಿ ನಡೆಯಿತು. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಆಯುಧಪೂಜೆಯನ್ನು ಸಡಗರದಿಂದ ಆಚರಿಸಿದರು.

ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ, ಕಾರ್ಯದರ್ಶಿ ರೇಣುಕುಮಾರ್, ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ. ಸುರೇಶ್, ಕಾರ್ಯದರ್ಶಿ ಹೆಚ್.ಇ ರಾಜ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.