ಮಡಿಕೇರಿ, ಅ. ೪: ಮಡಿಕೇರಿ ಜನೋತ್ಸವದ ಅಂಗವಾಗಿ ಮಕ್ಕಳ ದಸರಾ ಪ್ರಯುಕ್ತ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಟಿವಿ ರಿಯಾಲಿಟಿ ಶೋ ಖ್ಯಾತಿಯ ಜ್ಞಾನ ಗುರುರಾಜ್, ಮಿಥುನ್ ಮುದ್ದಯ್ಯ ಅವರಿಂದ ಪುಟಾಣಿ ಕಲರವ, ಜಿಲ್ಲೆಯ ಬಾಲಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಧುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಅವರ ಕಲಾಕಾವ್ಯ ನಾಟಕ ಶಾಲೆ ವತಿಯಿಂದ ರಾಮಾಯಣ ದರ್ಶನಂ ನೃತ್ಯ, ವಿಕ್ರಂ ಜಾದೂಗಾರ್ ಅವರಿಂದ ಜಾದು ಪ್ರದರ್ಶನ ನಡೆಯಿತು.