ಗುಡ್ಡೆಹೊಸೂರು, ಅ. ೪: ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗ್ಗೆ ಮತ್ತು ನೀರಿನ ಬಳಕೆ, ಮಿತ ಉಪಯೋಗದ ಬಗ್ಗೆ ಗುಡ್ಡೆಹೊಸೂರಿನಲ್ಲಿ ಕಿರು ಚಿತ್ರ ಪ್ರದರ್ಶನ ನಡೆಯಿತು.
ಇಲ್ಲಿನ ಪಿ.ಡಿ.ಓ ಶ್ಯಾಂ, ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಅರುಣ್ಕುಮಾರ್, ಬಿ.ಎಂ. ಸಂತೋಷ್, ಕೌಶಿಕ್ ಮುಂತಾದವರು ಹಾಜರಿದ್ದರು.