ವೀರಾಜಪೇಟೆ, ಅ. ೪: ಪ್ರಸ್ತುತ ದಿನ ಬಳಕೆಯ ಗೃಹ ಉಪಯೋಗಿ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರದ ಎಸ್.ಅರ್. ರಾಮಮೂರ್ತಿ ರಸ್ತೆಯ ಆಟೋ ಚಾಲಕ ಮತ್ತು ಮಾಲೀಕರಾಗಿರುವ ಝಾಕೀರ್ ಅಲಿಯಾಸ್ ಪಾತಿ ಎಂಬವರು ಆಯುಧ ಪೂಜೆ ಅಂಗವಾಗಿ ತಮ್ಮ ವಾಹನವನ್ನು ಪ್ರಕೃತಿದತ್ತವಾದ ಕಾಡು ಎಲೆಗಳಿಂದ ಸಿಂಗರಿಸಿದ್ದರು.

ಈ ಬಗ್ಗೆ ಮಾತನಾಡಿದ ಝಾಕೀರ್ ಹೂವಿನ ದರ, ಅಲಂಕಾರಿಕ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹೂವು ಕೊಂಡುಕೊಳ್ಳಲು ಹೆಚ್ಚಿನ ದರ ನೀಡಿ ಅಲಂಕಾರ ಮಾಡಲು ತಾನು ಶಕ್ತನಲ್ಲದ ಕಾರಣ ಕಾಡು ಎಲೆಗಳಿಂದ ತನ್ನ ವಾಹನಕ್ಕೆ ಅಲಂಕಾರ ಮಾಡಿದ್ದೇನೆ ಎಂದು ಹೇಳಿದರು.

-ಕೆ.ಕೆ.ಎಸ್.