ಮಡಿಕೇರಿ, ಅ. ೨: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ೪೯ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಂಞÂÃರ ಪಿ. ಸಾಬು ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಉಪಾಧ್ಯಕ್ಷ ಹೊನ್ನದ ಎಸ್. ಇಂದ್ರಕುಮಾರ್ ಪ್ರಾರ್ಥಿಸಿದರು. ನಂತರ ಅಧ್ಯಕ್ಷರು ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಹೊಂದಿದೆ. ಸಂಘದಲ್ಲಿ ೧೨೭೬ ಮಂದಿ ಸದಸ್ಯರಿದ್ದು ವರ್ಷಾಂತ್ಯಕ್ಕೆ ಒಟ್ಟು ರೂ. ೧೬೦.೪೧ ಲಕ್ಷ ಪಾಲು ಬಂಡವಾಳ, ಕ್ಷೇಮ ನಿಧಿ ರೂ. ೧೪೭ ಲಕ್ಷ ಹೊಂದಿದ್ದು, ರೂ. ೧೨.೭೩ ಕೋಟಿಯಷ್ಟು ಠೇವಣಿಯನ್ನು ಸಂಗ್ರಹಿಸಿ, ಈ ಸಾಲಿನಲ್ಲಿ ಸದಸ್ಯರಿಗೆ ರೂ. ೧೪೯೬.೬೪ ಲಕ್ಷಗಳಷ್ಟು ಸಾಲ ವಿತರಿಸಲಾಗಿದ್ದು, ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವರದಿ ಸಾಲಿನಲ್ಲಿ ರೂ. ೩೫.೩೧ ಲಕ್ಷ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ. ೧೧ ರಷ್ಟು ಡಿವಿಡೆಂಡ್ ನೀಡಲಾಗಿರುತ್ತದೆ ಎಂದು ತಿಳಿಸಿದರು
ಈ ಸಂದರ್ಭ ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಕಾರ್ಯಚಟುವಟಿಕೆಯ ಬಗ್ಗೆ ಚರ್ಚೆ ನಡೆಸಲಾಯಿತು. ಸಂಘದ ಲೆಕ್ಕಪತ್ರ ಮಂಡನೆ ಮಾಡಿ ಸಭೆಯ ಒಪ್ಪಿಗೆ ಪಡೆಯಲಾಯಿತು. ನಂತರ ಸಂಘದ ಅಭಿವೃದ್ಧಿಯ ಬಗ್ಗೆ ಸಮಗ್ರ ಚರ್ಚೆ ನಡೆದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಸಂಘದ ಸದಸ್ಯರ ಮಕ್ಕಳಲ್ಲಿ ೨೦೨೨ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಹಿರಿಯ ೧೪ ಜನ ನಿರ್ದೇಶಕರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಹೊನ್ನದ ಎಸ್. ಇಂದ್ರಕುಮಾರ್, ನಿರ್ದೇಶಕರುಗಳಾದ ಉಳುವಾರನ ಎನ್. ಪಳಂಗಪ್ಪ, ತೋರೆರ ಎಂ. ಅಯ್ಯಪ್ಪ, ಪರ್ಲಕೋಟಿ ಎ. ಕಾವೇರಪ್ಪ, ತುಂತ್ತಜ್ಜೀರ ಆರ್. ತಿಮ್ಮಯ್ಯ, ಮಲೆಯರ ಆರ್. ಧರಣೇಶ್, ಕೂಪದಿರ ಸಿ. ಪ್ರಮೀಳ, ಬಿದ್ದಂಡ ಡಿ. ಗಂಗಮ್ಮ, ತೆಕ್ಕಡೆ ಆರ್. ಹರಿಣಿ, ಹೆಚ್.ಆರ್. ವಾಸಪ್ಪ, ಅಮ್ಮಾಟಂಡ ಎ. ಲೀಲಾ, ಸಂಘದ ಮೇಲ್ವಿಚಾರಕ ಹೆಚ್.ಎನ್. ರಘು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಂ. ತೀರ್ಥಕುಮಾರ್, ಸಿಬ್ಬಂದಿ ಎ.ಕೆ. ವಿಧ್ಯಾಶ್ರೀ ಹಾಗೂ ಸದಸ್ಯರು ಉಪಸ್ಥಿತರಿದ್ದರು.