ಮಡಿಕೇರಿ, ಅ. ೨: ಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ ಕನ್ನಡವು ಜ್ಯೋತಿ ಬೆಳಗಿದಂತೆ. ಅದರ ಪ್ರಕಾಶ ಎಲ್ಲೆಡೆ ಪಸರಿಸಲಿ ಎಂದರು. ಕನ್ನಡವು ನಮ್ಮ ಮೆಚ್ಚಿನ ಭಾಷೆ, ಕನ್ನಡವನ್ನು ಪ್ರೀತಿಸಬೇಕು ಆಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಕೊಡಗು ಕೊಡವರ ಆಚಾರ, ವಿಚಾರ, ವೇಷ, ಭೂಷಣಗಳನ್ನು ಪ್ರತಿಬಿಂಬಿಸುತ್ತದೆ. ಕೊಡಗಿನ ಯೋಧರು ದೇಶವನ್ನು ಕಾಯುವವರು. ಅವರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ೧೯೧೮ರಲ್ಲಿ ಸೇನೆಗೆ ಸೇರಿ ಉನ್ನತ ಅಧಿಕಾರಿಯಾಗಿ ಸಹಾಯ ಮತ್ತು ಪ್ರೀತಿ ಸಹನೆ ಮೂಲಕ ಯುದ್ಧವನ್ನು ಗೆದ್ದರು ಎಂದರು. ಕಸಾಪ ಕೋಶಾಧಿಕಾರಿ ಶಬರೀಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಂಯಮ, ಸಮಯ ಪಾಲನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗುವ ಮೂಲಕ ದೇಶಕ್ಕೆ ಹಾಗೂ ತಂದೆ ತಾಯಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹಳೆ ವಿದ್ಯಾರ್ಥಿಯಾಗಿ ತಮ್ಮ ಅನುಭವವನ್ನು ಹಂಚಿಕೊAಡರು. ಶಾಲೆಯ ಸಹ ಶಿಕ್ಷಕ್ಷಿ ಸಿ.ಸಿ.ಕೋಮಲ ಸ್ವಾಗತಿಸಿದರು. ವೀರಾಜಪೇಟೆ ಕಸಪಾ ಗೌರವ ಕಾರ್ಯದರ್ಶಿ ಟಾಮಿ ಥೋಮಸ್ ನಿರೂಪಿಸಿದರು. ಶಿಕ್ಷಕಿ ನಿರ್ಮಾಲ ವಂದಿಸಿದರು.