ಮಡಿಕೇರಿ, ಅ. ೩: ರಾಷ್ಟಿçÃಯ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇವರುಗಳ ಕೊಡಗು ಭೇಟಿ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ರದ್ದಾಗಿದೆ.

ಈಗಾಗಲೇ ಕರ್ನಾಟಕ ಪ್ರವೇಶಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ದಸರಾ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮುಂದೂಡಲ್ಪಟ್ಟಿದೆ. ರಾಹುಲ್‌ಗಾಂಧಿ ಅವರು ಇಂದು ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ನಡುವೆ ಸೋನಿಯಾ ಗಾಂಧಿ ಅವರು ಅಪರಾಹ್ನ ವಿಮಾನದಲ್ಲಿ ನವದೆಹಲಿಯಿಂದ ಮೈಸೂರಿಗೆ ಆಗಮಿಸಿದ್ದರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಗೆ ಸುಮಾರು ೧ ಗಂಟೆ ವೇಳೆ ಆಗಮಿಸುವ ಕಾರ್ಯಕ್ರಮವಿತ್ತು.

ಆದರೆ ಕೊನೆ ಘಳಿಗೆಯಲ್ಲಿ ಹವಾಮಾನ ಬದಲಾಗಿ ಮೋಡ ಕವಿದ ವಾತಾವರಣವಿದ್ದುದರಿಂದ ಹೆಲಿಕಾಪ್ಟರ್ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆಗ ಕಾಂಗ್ರೆಸ್ ಪ್ರಮುಖರು ರಸ್ತೆ ಮೂಲಕ ಕಾರಿನಲ್ಲಿ ಮೈಸೂರಿನಿಂದ ಮಡಿಕೇರಿಗೆ ಪ್ರಯಾಣ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಆದರೆ ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿಂದಾಗಿ ಸೋನಿಯಾ ಗಾಂಧಿ ಅವರು ಈ ಕಾರ್ಯಕ್ರಮಕ್ಕೆ ಸಮ್ಮತಿ ನೀಡಲಿಲ್ಲ. ಇಂದು ಸೇರಿದಂತೆ ಮೂರು ದಿನಗಳ ಕಾಲ ಮೈಸೂರಿನ ಕಬಿನಿ ರೆಸಾರ್ಟ್ನಲ್ಲಿಯೆ ತಂಗುವ ಇಂಗಿತ ವ್ಯಕ್ತಪಡಿಸಿದರು. ದಸರಾದ ಮರುದಿನ ಅಂದರೆ ತಾ. ೬ ರಂದು ಅವರು ಮಂಡ್ಯದ ನಾಗಮಂಗಲದಲ್ಲಿ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿದು ಬಂದಿದೆ.

ಈ ನಡುವೆ ಸೋನಿಯಾ ಅವರ ಕೊಡಗು ಭೇಟಿ ರದ್ದಾಗಿರುವಂತೆಯೆ ಸಂಜೆ ಸುಮಾರು ೬ ಗಂಟೆ ವೇಳೆ ಮೈಸೂರಿನಿಂದ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿ ತಲುಪಲು ತಯಾರಿ ನಡೆಸಿದ್ದ ರಾಹುಲ್‌ಗಾಂಧಿ ಅವರು ಕೂಡ ತಮ್ಮ ಭೇಟಿಯನ್ನು ರದ್ದುಪಡಿಸಿ ಮೈಸೂರಿನಲ್ಲಿಯೆ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಸೋನಿಯಾ - ರಾಹುಲ್ ಭೇಟಿಯ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಸೋನಿಯಾ ಅವರು ಹೆಲಿಪ್ಯಾಡ್‌ನಲ್ಲಿ ಇಳಿಯುವ ಸಂದರ್ಭ ಸಂಪೂರ್ಣ ಭದ್ರತೆ ವ್ಯವಸ್ಥೆಗೊಳಿಸಲಾಗಿತ್ತು. ಅಲ್ಲಿ ಅವರನ್ನು ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಮಾಧ್ಯಮವಕ್ತಾರ ಟಿ.ಪಿ. ರಮೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖರಾದ ಮಂಥರ್‌ಗೌಡ, ಮಾಜಿ ಸಚಿವರುಗಳಾದ ಜೀವಿಜಯ, ಸುಮಾವಸಂತ್, ಕೆಪಿಸಿಸಿ ಪ್ರಮುಖರಾದ ಚಂದ್ರಮೌಳಿ,

(ಮೊದಲ ಪುಟದಿಂದ) ಕೆ.ಪಿ. ಚಂದ್ರಕಲಾ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಇನ್ನಿತರರು ಹಾಜರಿದ್ದರು. ಮಾಧ್ಯಮದವರಿಗೂ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸೋನಿಯಾ ಭೇಟಿ ಕಾರ್ಯಕ್ರಮ ರದ್ದಾದ ಕೂಡಲೇ ಎಲ್ಲರೂ ಅಲ್ಲಿಂದ ನಿರ್ಗಮಿಸಿದರು.

ಈ ನಡುವೆ ಕೊಡಗು ಪೊಲೀಸರು ಮಡಿಕೇರಿ ನಗರದಲ್ಲಿ ಸೋನಿಯಾ ಅವರು ಆಗಮಿಸುವ ಕಾರ್ಯಕ್ರಮವಾಗಿ ಬಿಗಿಬಂದೋಬಸ್ತ್ ಕಲ್ಪಿಸಿದ್ದರು. ಹೆಲಿಪ್ಯಾಡ್‌ನಿಂದ ಮೇಕೇರಿಯ ಖಾಸಗಿ ರೆಸಾರ್ಟ್ಗೆ ತೆರಳುವುದಕ್ಕಾಗಿ ವಾಹನಗಳ ಸಂಚಾರ ನಿಲುಗಡೆಯನ್ನು ನಿರ್ಬಂಧಿಸಿ ಪೊಲೀಸರು ಮೈಕ್‌ನಲ್ಲಿ ಘೋಷಿಸುತ್ತಿದ್ದುದು ಕಂಡು ಬಂತು. ಕಾರ್ಯಕ್ರಮ ರದ್ದಾದ ಕೂಡಲೇ ನಗರದ ಎಲ್ಲೆಡೆ ಭದ್ರತೆಯ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಸ್ಥಳದಿಂದ ನಿರ್ಗಮಿಸಿದ ಸನ್ನಿವೇಶ ಕಂಡುಬAದಿತು.