ಚೆಟ್ಟಳ್ಳಿ, ಅ. ೨: ಚೆಟ್ಟಳ್ಳಿಯಲ್ಲಿ ಅವರ್ ಕ್ಲಬ್ಬಿನ ಮಹಿಳೆಯರು ಪುರಾತನ ಕಾಫಿ ನಾಡಿನ ಸಾಂಪ್ರದಾಯವನ್ನು ನೆನೆಸುವ ಮೂಲಕÀ ವಿಶ್ವ ಕಾಫಿ ದಿನವನ್ನು ವಿಭಿನ್ನವಾಗಿ ಆಚರಿಸಿದ್ದು ವಿಶೇಷವಾಗಿತ್ತು.
ಕೊಡಗಿನ ಪುರಾತನ ಸಂಪ್ರದಾಯಿಕ ಉಡುಗೆತೊಟ್ಟ ಮಹಿಳೆಯರು ಚೆಟ್ಟಳ್ಳಿಪೌಢಶಾಲೆಯ ಮೈದಾನದಲ್ಲಿ ಸೇರಿದ ಕಾಫಿನಾಡಾದ ಕೊಡಗಿನ ಕಾಫಿಯ ಸ್ವ್ವಾದವು ವಿಶ್ವಮಟ್ಟಕ್ಕೆ ಸಾರಲಿ ಎಂಬ ಧ್ಯೇಯದೊಂದಿಗೆ ವಿಶ್ವ ಕಾಫಿ ದಿನವನ್ನು ವಿಭಿನ್ನವಾಗಿ ಆಚರಿಸಿದರು. ಪುರಾತನ ಕಾಲದಲ್ಲಿ ಕಾಫಿಯನ್ನು ಕುಟ್ಟುವ ಮರದ ವನಕೆ, ಹುರಿಯುವ, ಪುಡಿ ಮಾಡುವ ಪುರಾತನ ಕೈ ಯಂತ್ರದ ಬಳಕೆಯ ಮೂಲಕ ಕಾಫಿಯನ್ನು ಕುಟ್ಟಿದರು. ವನಲಿಯ ಮೂಲಕ ಕಾಫಿ ಬೆಳೆಯನ್ನು ಶುದ್ಧಗೊಳಿಸಿದರು. ಸ್ಥಳದಲ್ಲೆ ತಾಜಾ ಕಾಫಿ ತಯಾರಿಸಿದ ಮಹಿಳೆಯರು ಕೊಡಗಿನ ಕಾಫಿಯನ್ನು ಸವಿಯುತಲೇ ವಿಶ್ವ ಕಾಫಿಡೇಗೆ ಚಿರ‍್ಸ್ ಎಂದರು.
ಕಾಫಿ ಕುಟ್ಟುವಾಗ ಮಹಿಳೆಯರ ವಿಭಿನ್ನ ಹಾಡುಗಳು, ಲೆರುಳಿ.. ಲೆರುಳಿ.. ಹಾಡಿನ ದಾಟಿ, ಮಹಿಳೆಯರ ಕುಣಿತ ವಿಭಿನ್ನವಾಗಿತ್ತು.