ಸುಂಟಿಕೊಪ್ಪ, ಅ. ೩: ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪಂಡಿತ್ ದಿನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು ಸುಂಟಿಕೊಪ್ಪ ದ್ವಾರಕ ಸಭಾಂಗಣದಲ್ಲಿ ಆಚರಿಸಲಾಯಿತು. ದಿನದ ಮಹತ್ವದ ಅಂಗವಾಗಿ ಒಬಿಸಿ ಕಾರ್ಯದರ್ಶಿ, ಗ್ರಾ.ಪಂ. ಸದಸ್ಯೆ ಪಿ.ಜಿ. ಶಾಂತಿ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾ.ಪಂ. ಸದಸ್ಯ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿದರು. ಸಭೆಯ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಆಲಿಸಲಾಯಿತು. ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಮಂಜುಳಾ, ವಸಂತಿ, ಗೀತಾ, ಸುರೇಶ್ (ಪುಟ್ಟ), ಶಕ್ತಿ ಕೇಂದ್ರದ ಪ್ರಮುಖ್‌ಗಳಾದ ಪ್ರಶಾಂತ್, ವಾಸುದೇವ್, ಕಾರ್ಯಕರ್ತರಾದ ದಿನು ಕಾವೇರಪ್ಪ, ಅನಿಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.